ಅವಳು

ಅದಮ್ಯ ಚೈತನ್ಯ ಹೆಣ್ಣು

ಹೆಮ್ಮೆಯಿರಲಿ ಹೆಣ್ಣೆಂದರೆ

ಕುಟುಂಬದ ಆಧಾರವೂ ಆಗಿರೆ


ಜನ್ಮದಾತೆಯೂ ತಾನಾಗಿ

ಧರ್ಮನಿಷ್ಠಳು ನಿಜವಾಗಿ

ಹೆಣ್ಣವಳು ಕುಟುಂಬದ ಕಣ್ಣಾಗಿ


ಹುಟ್ಟಿದ ಮನೆಯಲ್ಲೂ

ಮೆಟ್ಟಿದ ಮನೆಯಲ್ಲೂ

ತಾ ತೇದು ಜೀವವನು

ಸಲುಹುವಳು ತಾಯಾಗಿ


ನಂಬಿಗೆಯಲಿ ಮಿಗಿಲವಳು

ತ್ಯಾಗದಲಿ ಮೊದಲವಳು

ಕರುಣೆಯಲಿ ಸಹನೆಯಲಿ

ಸಮವಿಹರಾರು ಅವಳಿಗೆ  


ಸಹೋದರಿಯು ತಾನಾಗಿ

ಸಂಬಂಧಗಳ ಸಲುಹುವಳು

ಬ್ರಾತೃತ್ವ ಪಾಲಿಪಳು


ಸೋಲುಗೆಲುವಲ್ಲೂ ಜೊತೆಯಾಗಿ

ಸಂತೈಸುತ ಸಲಹೆಯಾ  ನೀಡುವಳು

ಸ್ನೇಹಿತೆಯುತಾನಾಗಿ

ಸುಖ ದುಃಖದಿ ಸಮನಾಗಿ


ವಂಶವ ಬೆಳಗುವಳು

ಸಂಸ್ಕಾರ ನೀಡುವಳು

ಸರ್ವರಿಗೂ ಒಳಿತ ಬಯಸುವವಳು


ತನ್ನನೋವನು ಮರೆತು

ಪರಹಿತದಿ ಬೆರೆತು ನಲಿಯುವವಳು

ಅವಳು ಕೇವಲ ಸ್ತ್ರೀಯಲ್ಲ

ಮನುಕುಲದ ಶಕ್ತಿಯವಳು.


ಪ್ರೀತಿ. ಮಾಂತಗೌಡ. ಬನ್ನೆಟ್ಟಿ.