ಜಗದೊಳಗೆ ಕರಾಳ ಕೇಕೇ

ಹಾಕುತಿದೆ ಕೊರೋನಾ..

ಕರ್ನಾಟಕದಿ ಹೊಸ ಸಮಸ್ಯೆ

ಹುಟ್ಟು ಪಡೆದಿದೆ ನಿಜಾನಾ..?


ಸಾವಿನ ಭೇಟೆಯ ಸ್ಪರ್ಧೆಯಲಿ

ಜಯಭೇರಿ ನಿಂದೇನಾ..!

ಮಧ್ಯಪಾನಕ್ಕಾಗಿ ಆತ್ಮಹತ್ಯೆಯ

ಮೊರೆ, ಇದು ನನ್ನ ನಾಡೇನಾ...?


ಭೂಮಾತೆಯ ಒಡಲು ಬರಿದಾಗದಿರಲು

ನಾವೆಲ್ಲ ಮನೇಯಲ್ಲೇ ಇರೋಣ..

ಬಾಂಧವ್ಯವೆಂಬ ಬೆಲ್ಲದ ಸವಿಯ

ತಪ್ಪದೇ ನಾವೆಲ್ಲ ಸವಿಯೋಣ...

              - - ಮಾಗಿದ ಮನಸ್ಸು