ಮನಸಾ ವಾಚಾ ಕರ್ಮಣಾ

ವಾಗ್ದಾನ ನೆರವೇರಿತು !


ಯಾರ ಮನಸು

ಯಾರ ವಾಕು

ಯಾರ ಕ್ರಿಯೆಯೋ ?

ಕರ್ಮ ಪ್ರಾರಬ್ಧ ಅಂತೂ

ಕಂಡಿತವು ಕತ್ತೆದೆ ,

ಅದೇ ಪ್ರಜೇದೆ !ಜನ ಪ್ರಜೇದೆ!


ನಿಧಿ ಹುಡುಕಿ ಪ್ರತಿನಿಧಿಯು

ತನಗಾಗಿ ರಾಜ್ಯ !

ಮಂತ್ರಿ ಸ್ಥಾನವವೇ ಪ್ರಾಧ್ಯಾ

ಹೊನ್ನಿಂದ ಸಾಧ್ಯ !

ಮತದಾರ ಮತ್ತಿನಲ್ಲಿ

ಸೇವೆ ಶೇವಾಗೋಯ್ತು !


ಇದು ಆರ್ಜವವಲ್ಲ  

ಜನರಿಗೆ ಕಣ್ಣಿಲ್ಲ !

ಪ್ರಜೆಯೆಲ್ಲ ಬರಡೇ

ಎಲ್ಲಿ ಬುರುಡೆ ?


ಸೇವಕರು ಇವರಲ್ಲ

ಪ್ರಜಾ ಸೇವೆ ಈಗಿಲ್ಲ !

ವ್ಯಾಪಾರವಯ್ಯ ,

ಇದು ಬರೀ ವ್ಯಾಪಾರ !


ಕೋಟಿ ಕೋಟಿ ವಹಿವಾಟು

ಕೋತಿ ಕೋತಿ ಪ್ರಜೆಯಾತು !

ಕುರ್ಚಿ ಕಾಯವ ಕೆಲಸ

'ನೀ 'ಬರುವ ತನಕ !


' ನೀ'ನಿಲ್ಲಿ ದೇವನೋ ,

ಎಮ್ಮೆಯೋ ,ಎಮ್ಮಲ್ಲೆಯೋ

ಹರಾ ಹರಾ ಎದ್ದೇಳು

ಶ್ರೀಚೆನ್ನ ಮತದಾರ !


ಅಕೇಭ