ಉಡುಪಿ,(ಸೆಪ್ಟೆಂಬರ್, 3):  ಉಡುಪಿ (ಕರ್ನಾಟಕ ವಾರ್ತೆ) ಮೀನುಗಾರಿಕೆ ಇಲಾಖೆ ವತಿಯಿಂದ ಪಂಜರದಲ್ಲಿ ಮೀನುಕೃಷಿ ತರಬೇತಿ ಕಾರ್ಯಾಗಾರವನ್ನು ಸೆಪ್ಟೆಂಬರ್ 8ರಂದು ಟೌನ್ ಹಾಲ್‌ನ  ಅಜ್ಜರಕಾಡು ಉಡುಪಿಯಲ್ಲಿ ಪೂರ್ವಾಹ್ನ 9 ಗಂಟೆಯಿAದ ಸಂಜೆ 4 ರ ತನಕ ಆಯೋಜಿಸಿದ್ದು ,ಪಂಜರ ಮೀನು ಕೃಷಿ ಕೈಗೊಳ್ಳಲು ಇಚ್ಚಿಸಿರುವ ಆಸಕ್ತರು ಮೀನುಗಾರಿಕೆ ಸಹಾಯಕ ನಿರ್ದೇಶಕರು ,ಶ್ರೇಣಿ-2 ಕಛೇರಿ ಉಡುಪಿ ಇಲ್ಲಿ ಸೆಪ್ಟೆಂಬರ್ 5ರಂದು ಅಪರಾಹ್ನ  4 ಗಂಟೆಯೊಳಗೆ ಹೆಸರನ್ನು ನೊಂದಾಯಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ,ಶ್ರೇಣಿ-2 ಕಛೇರಿ ಉಡುಪಿ ,ದೂರವಾಣಿ ಸಂಖ್ಯೆ: 9844339919,9741448143 ಇವರನ್ನು ಸಂಪರ್ಕಿಸಬಹುದಾಗಿದೆ.