ಉಡುಪಿ,(ಡಿಸೆಂಬರ್ 10): ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶದಂತೆ, ಉಡುಪಿ ಡೆಪ್ಯೂಟಿ ಕಮಿಷನರ್ ಆಫ್  ಎಕ್ಸೆಸ್ ಇವರ ನಿರ್ದೇಶನದ ಮೇರೆಗೆ ಉಡುಪಿ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಯೊoದಿಗೆ ಮಂಗಳವಾರ ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮದ ಕುಂತಾಲಕಟ್ಟೆ ಎಂಬಲ್ಲಿ ಅಕ್ರಮವಾಗಿ 64.800 ಲೀ ಮದ್ಯವನ್ನು ದಾಸ್ತಾನು ಇಟ್ಟಿರುವುದನ್ನು ಪತ್ತೆ ಹಚ್ಚಿ ಸದರಿ ಮದ್ಯವನ್ನು ವಶಪಡಿಸಿಕೊಂಡು, ಉಡುಪಿ ತಾಲೂಕು ಪೆರ್ಡೂರು ಗ್ರಾಮದ,  ಶಿಲಾವನ ಜೋಗಿ ಬೆಟ್ಟುವಿನ ಮಂಜುನಾಥ ಕುಂದರ್ ವಿರುದ್ಧ ಪ್ರಕರಣ ದಾಖಲಿಸಿರುತ್ತಾರೆ ಹಾಗೂ ಉಡುಪಿ ವಲಯ-2 ರ ಅಬಕಾರಿ ನಿರೀಕ್ಷಕರು, ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಬುಧವಾರ ಬ್ರಹ್ಮಾವರ ತಾಲೂಕು ಸೈಬ್ರಕಟ್ಟೆಯಿಂದ ಶಿರೂರು ಮೂರುಕೈಗೆ ಹೋಗುವ ರಸ್ತೆಯ ಬನ್ನೇರಳು ಕಟ್ಟೆ ಎಂಬಲ್ಲಿ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಪ್ರಸನ್ನ ಎಂಬುವವರು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 6.480 ಲೀ ಮದ್ಯವನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ, ವಾಹನ ಹಾಗೂ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.