ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನಾಚರಣೆಯನ್ನಾಗಿ ನಾವು ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಪಾರ್ಶ್ವವಾಯು ಕಾಯಿಲೆಯ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜೀವಿತಾವಧಿಯಲ್ಲಿ ನಾಲ್ಕರಲ್ಲಿ ಒಬ್ಬರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ ಅಂದರೆ ಕರ್ನಾಟಕದ 61/2 ಕೋಟಿ ಜೀವಿತಾವಧಿಗೆ ಒಂದೂವರೆ ಕೋಟಿ ಜನರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ
ಮಿದುಳಿನ ಒಂದು ಭಾಗಕ್ಕೆ ರಕ್ತ ಸಂಚಾರ ಸ್ಥಗಿತಗೊಳ್ಳುವುದರಿಂದ ಪಾರ್ಶ್ವವಾಯು ಕಾಯಿಲೆಯು ಉಂಟಾಗುತ್ತದೆ
ರಕ್ತಚಲನೆಯಲ್ಲಿ ವ್ಯತ್ಯಯವಾದಾಗ ಮಿದುಳಿನ ನರಕೋಶಗಳು ನಿಷ್ಕ್ರಿಯಗೊಳ್ಳುತ್ತದೆ. ಅಂಕಿ ಅಂಶಗಳ ಪ್ರಕಾರ ಪಾರ್ಶ್ವವಾಯು ಕಾಯಿಲೆ ಆರಂಭವಾದ ಮೊದಲ 6 ಗಂಟೆಯವರೆಗೆ ಪ್ರತಿ ನಿಮಿಷಕ್ಕೆ 1.9 ಮಿಲಿಯನ್ ನರಕೋಶಗಳು ನಿಷ್ಕ್ರಿಯಗೊಳ್ಳುತ್ತದೆ.
ಪಾರ್ಶ್ವವಾಯು ಕಾಯಿಲೆಯ ಲಕ್ಷಣಗಳು
ಮಾತಿನಲ್ಲಿ ತೊದಲುವುದು
ದೇಹದ ಒಂದು ಭಾಗದ ನಿಯಂತ್ರಣ ಕಳೆದುಕೊಳ್ಳುವುದು
ದೇಹದ ಒಂದು ಭಾಗ ಮರಕಟ್ಟುವುದು
ಏಕಾಏಕಿ ದೃಷ್ಟಿ ದೋಷ ಕಾಣಿಸಿಕೊಳ್ಳುವುದು
ಪ್ರಜ್ಞೆ ಕಳೆದುಹೋಗುವುದು
ಕಾರಣಗಳು
ಅತಿಯಾದ ಧೂಮ/ ಮಧ್ಯಪಾನ
ಅನಿಯಂತ್ರಿತ ಸಕ್ಕರೆ ಕಾಯಿಲೆ
ಅತಿಯಾದ ರಕ್ತದೊತ್ತಡ
ರಕ್ತದಲ್ಲಿ ಕೊಬ್ಬು ಶೇಖರಣೆ
ವ್ಯಾಯಾಮವಿಲ್ಲದ ಜೀವನ
ಪಾರ್ಶ್ವವಾಯು ಕಾಯಿಲೆಯನ್ನು ತಡೆಯುವುದು
ರಕ್ತದ ಒತ್ತಡವನ್ನು ಸಾಮಾನ್ಯವಾಗಿರುವಂತೆ ನೋಡುವುದು
ಸಕ್ಕರೆ ಕಾಯಿಲೆಯ ನಿಯಂತ್ರಣ
ದುಶ್ಚಟದ ನಿವಾರಣೆ
ನಿಗದಿತ ವ್ಯಾಯಾಮ
2020 - ವರ್ಲ್ಡ್ ಸ್ಟ್ರೋಕ್ ಆರ್ಗನೈಜೇಷನ್ ಧ್ಯೇಯ ವಾಕ್ಯ - ಮೂವ್ ಟು ಪ್ರಿವೆಂಟ್ ಸ್ಟ್ರೋಕ್
ಕಾಯಿಲೆಯ ಚಿಕಿತ್ಸೆ
ರೋಗದ ಲಕ್ಷಣಗಳು ಕಂಡು ಬಂದಾಗ ಸಿಟಿ / ಎಂ ಆರ್ ಐ ಸ್ಕ್ಯಾನ್ ಮುಖಾಂತರ ಪತ್ತೆಹಚ್ಚಬಹುದು. ಕಾಯಿಲೆ ಶುರುವಾದ 41/2 ಗಂಟೆಯ ಒಳಗೆ ಬಂದರೆ ಮಿದುಳಿನ ರಕ್ತದಲ್ಲಿರುವ ಹೆಪ್ಪನ್ನು ಕರಗಿಸುವ ಇಂಜೆಕ್ಷನ್ (ಐ ವಿ - ಆರ್ ಟಿ ಪಿ ಏ ) ಕೊಡಬಹುದು. ಇದಲ್ಲದೆ ಕಾಲಿನ ರಕ್ತ ಅಪಧಮನಿಯ ಮುಖಾಂತರ ನಳಿಗೆ ಹಾಕಿ ಹೆಪ್ಪನ್ನು ತೆಗೆಯುವ ವ್ಯವಸ್ಥೆ ಇದೆ(ಮೆಕ್ಯಾನಿಕಲ್ ಥಂರೊಂಬೆಕ್ಟಮಿ )
ವೃದ್ಧರಿಗೆ ಈ ರೋಗವು ಹೆಚ್ಚಾಗಿ ಬರುವುದಾದರೂ ಯಾವುದೇ ವಯಸ್ಸಿನಲ್ಲಿ ಇದು ಕಾಣಿಸಿಕೊಳ್ಳಬಹುದು. ಹಲವಾರು ಜನರಲ್ಲಿ ಪಾರ್ಶ್ವವಾಯು ಕಾಯಿಲೆಗೆ ಸಾಂಪ್ರದಾಯಿಕ ಚಿಕೆತ್ಸೆಯೇ ಪರಿಹಾರ ಎಂಬ ನಂಬಿಕೆ ಇರುವುದರಿಂದ ಕಾಯಿಲೆ ಬಂಡ ತಕ್ಷಣ ಚಿಕಿತ್ಸೆ ಪಡೆಯುವುದು ವಿಳಂಬವಾಗುತಿದೆ. ಪಾರ್ಶ್ವವಾಯು ಕಾಯಿಲೆ ಶುರುವಾದ ನಂತರ ತ್ವರಿತಗತಿಯಲ್ಲಿ ನಿಷ್ಕ್ರಿಯಗೊಳ್ಳುವುದರಿಂದ ತ್ವರಿತಗತಿಯಲ್ಲಿ ಚಿಕಿತ್ಸೆ ಅಗತ್ಯ. ಟೈಮ್ ಐಸ್ ಬ್ರೈನ್ .
ಈ ಬಾರಿ 2020ರ ವರ್ಲ್ಡ್ ಸ್ಟ್ರೋಕ್ ಆರ್ಗನೈಜೇಷನ್ ಧ್ಯೇಯ ವಾಕ್ಯ- ಮೂವ್ ಟು ಪ್ರಿವೆಂಟ್ ಸ್ಟ್ರೋಕ್ .
ವ್ಯಾಯಾಮ ಮಾಡಿ - ಪಾರ್ಶ್ವವಾಯು ಕಾಯಿಲೆ ನಿವಾರಿಸಿ