ಇತ್ತೀಚೆಗೆ ಒಟ್ಟು 19 ಲಕ್ಷ ಇವಿಎಂ- ವಿದ್ಯುನ್ಮಾನ ಮತದಾನ ಯಂತ್ರಗಳು ನಾಪತ್ತೆಯಾಗಿದ್ದು, ಇದು ಚುನಾವಣೆಯಲ್ಲಿ ದುರ್ಬಳಕೆ ಆಗಿದೆಯೇ ಎಂಬುದರ ಬಗೆಗೆ ಚುನಾವಣಾ ಆಯೋಗಕ್ಕೆ ಜವಾಬ್ದಾರಿ ಇಲ್ಲವೆ ಎಂದು ವಿಧಾನಸಭೆಯಲ್ಲಿ ಚರ್ಚೆ ಆಯಿತು.
ಮಾಹಿತಿ ಹಕ್ಕಿನಡಿ ದೊರಕಿರುವ ಮಾಹಿತಿಯಂತೆ 19 ಲಕ್ಷ ಇವಿಎಂಗಳು ನಾಪತ್ತೆಯಾಗಿವೆ. ಬಿಇಎಲ್ನಿಂದ 9,64,270 ಮತ್ತು ಇಸಿಐಎಲ್ನಿಂದ 9,29,992 ಮತಯಂತ್ರಗಳು ಕಾಣೆಯಾಗಿವೆ. 2014- 15ರಲ್ಲಿ ಬಿಇಎಲ್ ಕಳುಹಿಸಿದ 62,183 ಮತಯಂತ್ರಗಳು ತಲುಪಿಲ್ಲ ಎಂದು ಆಯೋಗ ಹೇಳಿದೆ. ಚುನಾವಣಾ ಆಯೋಗಕ್ಕೆ ನೋಟೀಸು ನೀಡುವಂತೆ ಕಾಂಗ್ರೆಸ್ನ ಎಚ್. ಕೆ. ಪಾಟೀಲರು ಸಭಾಪತಿಗೆ ಮನವಿ ಮಾಡಿದರು.