ಕೆಲವರರಿಗೆ ಒಳ್ಳೆಯ ವಿದ್ಯೆ ಒಲಿದಿದೆ ಆದರೆ ಅವರ ಅಹಂಕಾರದ ಮಾತು ಕೆಸರೆರಚುವಂತೆ ಕೇಳಗರಿಗೆ ವಾಕರಿಕೆ ತರಿಸುತ್ತದೆ... ಅಕ್ಷರ ಅಕ್ಕರೆ ಬಿತ್ತಬೇಕೆ ಹೊರತು ಅಹಂಕಾರ ಬಿತ್ತಬಾರದು. ಅದಕ್ಕೆ ಹಿರಿಯರು ಹೇಳಿವರು   ವಿನಯವಿಲ್ಲದ ವಿದ್ಯೆ ಗುಣವಿಲ್ಲದ ರೂಪ ವ್ಯರ್ಥವೆಂದು...

ಕೆಲವರು ವಿದ್ಯೆ ಕಲಿಯುವುದೇ ಇನ್ನೊಬ್ಬರ ಕೀಳಾಗಿ ಕಾಣಲು ತಾನು ಉನ್ನತ ಸ್ಥಾನ ಗಳಿಸಿ ಇತರರ  ಒಳಿತಿಗಾಗಿ ಸಹಾಯ ಮಾಡಬೇಕು ಎಂಬ ಸಮಾಜಕ್ಕೊಸ್ಕರ ಶ್ರಮಿಸಬೇಕು    ಎಂದು ಅವರ ಮನದಲ್ಲಿ ಹುಟ್ಟುವುದು ದೂರದ ಮಾತು.. ತನ್ನ ಮನೆಯಲ್ಲೆ  ಹಿರಿಯರಿಗೆ ಗೌರವಿಸದ ಮೇಲೆ ಸಮಾಜವಾದರೂ ಹೇಗೆ ಸುಧಾರಿಸಿವರು...

ಈ ಬಗ್ಗೆ ಪೌರಾಣಿಕ  ಕಥೆಗಳು ಸಾಕಷ್ಟು ಇವೆ .ಒಮ್ಮೆ ಕೈಲಾಸದಲ್ಲಿ ನಾರದರು ಮಹಾಯೋಗಿ ಮಹರ್ಷಿಗಳ ಈಶ್ವರ  ಸಭೆಯಲ್ಲಿ ಉಪಸ್ಥಿತರಿದ್ದರು.ದುರ್ವಾಸ ಮುನಿಗಳು ಗ್ರಂಥಗಳ ಹೊರೆ ಹೊತ್ತು  ದುರ್ವಾಸ ಮುನಿ ಅವರನ್ನಾರನ್ನು ಲೆಕ್ಕಿಸದೆ  ನೇರವಾಗಿ ಶಿವನ ಪಕ್ಕದಲ್ಲಿ ಹೋಗಿ ಕೂರುತ್ತಾರೆ. ಶಿವನು ಮುಗುಳ್ನಕ್ಕು ದುರ್ವಾಸ ಮುನಿಗಳೇ ನಿಮ್ಮ ಅಧ್ಯಯನ ಎಲ್ಲಿವರೆಗೆ ಬಂದಿತು ಎಂದು ತಾನೆ ಮಾತು ಆರಂಭಿಸುತ್ತಾನೆ. ಆಗ ದುರ್ವಾಸ ಮುನಿ ತನ್ನ ಅಧ್ಯಯನ  ಅನೇಕ ಗ್ರಂಥಗಳ ಅದ್ಯಯನ ಮಾಡಿರುವೆ ಇವೆಲ್ಲ ನ ನಗೆ ಕಂಠಪಾಠವೆಂದು ತನ್ನ ಪಾಂಡಿತ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವಾಗ ನಾರದ ಮುನಿಗಳು  ಗ್ರಂಥಗಳನ್ನು ಹೊತ್ತ ಕತ್ತೆ ಎಂದು ಹೇಳುತ್ತಾರೆ ಆ ಮಾತು ಕೇಳಿ ದುರ್ವಾಸ ಮುನಿಯು ಸಿಟ್ಟಿನಿಂದ ಮಾತಾಡುತ್ತಾರೆ. ಆಗ ನಾರದರು ಹೇಳುತ್ತಾರೆ ಇದಕ್ಕೆ ನಾನು ಹೇಳಿದ್ದು ಇಷ್ಟು ಗ್ರಂಥಗಳ ಅಧ್ಯಯನ ಮಾಡಿದರು ಕೋಪ ಹೋಗಿಲ್ಲ ಅಹಂಕಾರ ಹೋಗಿಲ್ಲ ಹಾಗಾದರೆ ನೀವು ಗ್ರಂಥಗಳ ಹೊತ್ತ ಕತ್ತೆಯಲ್ಲದೆ ಇನ್ನೆನು ಎಂದಾಗ ದುರ್ವಾಸ ಮುನಿಗಳಿಗೆ ತನ್ನ ತಪ್ಪಿನ ಅರಿವಾಯಿತು...ನಾವು ಕೂಡ ಅನೇಕ ಸಾರಿ ನಮ್ಮ  ವಿದ್ಯೆಯ ಅಹಂ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ."ವಿದ್ಯೆಗೆ ವಿನಯವೇ ಭೂಷಣ" ಅಷ್ಟಕ್ಕೂ  ನಾವು ಕಲಿತ ವಿದ್ಯೆ ಇನ್ನೊಬ್ಬರು ನೀಡಿದ ದಾನ ಆ ದಾನದ ಬಗ್ಗೆ  ಅಹಂಕಾರ ಪಡುವ ಹಕ್ಕು ನಮಗಿಲ್ಲವೆಂಬುವುದು ನನ್ನ ಅನಿಸಿಕೆ...

ಅಂಜಲಿ ಶ್ರೀನಿವಾಸ್ ಖಟವಟೆ