ಮಂಗಳೂರು:- ಮಂಗಳೂರು "ದಿ ವಾಯ್ಸ್ ಆಫ್ ಬ್ಲಡ್ ಡೋನರ್” ಎಂಬ ಸಮಾಜ ಸೇವಾ ಸಂಘಟನೆ ಕೇವಲ ಮೂರು ವರುಷಗಳ ಅವಧಿಯಲ್ಲೇ ಅನೇಕ ಜನಪರ ಕಾರ್ಯಕ್ರಮಗಳನ್ನು ಏರ್ಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಮಾಜ ಸೇವಾ ಸಂಘಟನೆಯಾಗಿ ಗುರುತಿಸಿಕೊಂಡಿದೆ. ದಿ ವಾಯ್ಸ್ ಆಫ್ ಬ್ಲಡ್ ಡೋನರ್‌ನ ಕಾರ್ಯಕ್ರಮಗಳನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ವತಿಯಿಂದ 4 ಬಾರಿ ಗೌರವಿಸಲಾಗಿದೆ.
ಕಳೆದ 3 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ಸಂಘಟಿಸಿ ಸುಮಾರು 3 ಸಾವಿರ ಯುನಿಟ್ ರಕ್ತ ಸಂಗ್ರಹ ಮಾಡಿ ದಾನ ಮಾಡಿದಲ್ಲದೇ ಸಂಘಟನೆಯ ಸದಸ್ಯರು ಕೂಡಾ ನಿರಂತರವಾಗಿ ರಕ್ತದಾನ ಮಾಡುತ್ತಾ ಬಂದಿದ್ದಾರೆ. ಕೊರೋನದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ಲಾಸ್ಮ ದಾನ ಮಾಡಿ ನಿಟ್ಟೆ ಯೂನಿವರ್ಸಿಟಿಯಿಂದ ಅಭಿನಂದನಾ ಪತ್ರ ಸಿಕ್ಕಿರುತ್ತದೆ. ರಕ್ತದಾನಕ್ಕಾಗಿ ಎ.ಟೆ, ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್‌ನ ಸರ್ಟಿಫಿಕೆಟ್ ಕೂಡಾ ಸಿಕ್ಕಿರುತ್ತದೆ. ನಾಡಿನ ವಿವಿಧ ಸಂಘಟನೆಗಳಿಂದ ಪ್ರಶಸ್ತಿಗಳು, ಸನ್ಮಾನಗಳು ದೊರೆತಿರುತ್ತದೆ.
ದಿ ವಾಯ್ಸ್ ಅಫ್ ಬ್ಲಡ್ ಡೋನರ್ ರಕ್ತದಾನ ಶಿಬಿರಗಳನ್ನು ಮಾತ್ರವಲ್ಲದೆ ಇನ್ನೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಸರ್ವಧರ್ಮಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು, ಬಡ ಹೆಣ್ಣುಮಕ್ಕಳ ಮದುವೆಗೆ ಧನ ಸಹಾಯ, ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ, ಉಚಿತಪುಸ್ತಕ ವಿತರಣೆ, ಹೆಚ್.ಐ.ವಿ ಮಕ್ಕಳ ಸಂರಕ್ಷಣಾ ಕೇಂದ್ರಗಳಿಗೆ ಉಚಿತ ಅಕ್ಕಿ ವಿತರಣೆ, ವಿಕಲ ಚೇತನರಿಗೆ ವೀಲ್ ಚೆಯರ್ ವಿತರಣೆ, ಪ್ರತೀ ರಮ್ಜಾನ್ ತಿಂಗಳಲ್ಲಿ ಸರ್ವ ಧರ್ಮಿಯರಿಗೂ ರಮ್ಜಾನ್ ಕಟ್ ವಿತರಣೆ ಹೀಗೆ ಸಮಾಜ ಸೇವೆಯ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಸಂಘಟನೆ ಮಾಡಿದ ಸೇವೆ ಅನನ್ಯವಾದದು, ಮಂಗಳೂರು ನಗರದಲ್ಲಿ ಹೊಟ್ಟೆಗೆ ಅನ್ನವಿಲ್ಲದೆ ಪರದಾಡುತ್ತಿದ್ದವರಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಡ ಕುಟುಂಬಗಳಿಗೆ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಗಿತ್ತು.
ಮಂಗಳೂರು ಬಂದರ್ ಪ್ರದೇಶದ ಉತ್ಸಾಹಿ ತರುಣ, ಸಮಾಜ ಸೇವಕ, ರವೂಫ್ ಬಂದರ್‌ರವರ ನೇತೃತ್ವದಲ್ಲಿ 3 ವರ್ಷಗಳ ಅಲ್ಪಾವಧಿಯಲ್ಲಿ ಜಿಲ್ಲೆಯ ಹೆಸರಾಂತ ಸಮಾಜ ಸೇವಾ ಸಂಘಟನೆಯಾಗಿ ಗುರುತಿಸಿಕೊಂಡ ದಿ ವಾಯ್ಸ್ ಆಫ್ ಬ್ಲಡ್ ಡೋನರ್ ಸಂಸ್ಥೆಯ ಸದಸ್ಯರಿಗೆ ತಮ್ಮ ಸಮಾಜ ಸೇವೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಲಯನ್ಸ್ ಕ್ಲಬ್ ಆವಕಾಶವನ್ನು ಕಲ್ಪಿಸಿದೆ.
ಲಯನ್ಸ್ ಕ್ಲಬ್ ನ ನೂರನೇ ಬ್ರಾಂಚ್ ಲಯನ್ಸ್ ಕ್ಲಬ್ ಮಂಗಳೂರು ಸೆಂಚೂರಿಯನ್ ಇದೀಗ “ದಿ ವಾಯ್ಸ್ ಆಫ್ ಬ್ಲಡ್ ಡೋನರ್” ಸದಸ್ಯರನ್ನೊಳಗೊಂಡು ಸ್ಥಾಪನೆಯಾಗಿರುತ್ತದೆ. ಸಾದತ್ (ಅಧ್ಯಕ್ಷ), ರವೂಫ್ (ಉಪಾಧ್ಯಕ), ರುಬಿನಾ (ಕಾರ್ಯದರ್ಶಿ), ಬದ್ರುದ್ದೀನ್ (ಜೊತೆ ಕಾರ್ಯದರ್ಶಿ), ತೌಹಿದ್ (ಕೋಶಾಧಿಕಾರಿ) ಮತ್ತು ಇತರ ಸದಸ್ಯರು ಸೇರಿ ಲಯನ್ಸ್ ಕ್ಲಬ್ ಮಂಗಳೂರು ಸೆಂಚೂರಿಯನ್ ಸ್ಥಾಪನೆಯಾಗಿದೆ. ಈ ಅವಕಾಶವನ್ನು ಕಲ್ಪಿಸಿದ ಲಯನ್ಸ್ ಲಾರೆನ್ಸ್ ಎಂ.ಲೋಬೋ, ಲಯನ್ ಗೋವರ್ಧನ್ ಶೆಟ್ಟಿ ಮತ್ತಿತರರಿಗೆ ದಿ ವಾಯ್ಸ್ ಆಫ್ ಇಡ್ ಡೋನರ್ ಆಬಾರಿಯಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.