ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಸಂವಹನ ಮತ್ತು ಮಾಧ್ಯಮ ಸಮಿತಿ ಪ್ಯಾನಲಿಸ್ಟ್ ಆಗಿ ದ.ಕ.ಜಿಲ್ಲಾ  ಕಾಂಗ್ರೆಸ್  ವಕ್ತಾರರಾದ ಅಭಿಷೇಕ್ ಉಳ್ಳಾಲ್  ಅವರು ನೇಮಕಗೊಂಡಿದ್ದಾರೆ. ಅಭಿಷೇಕ್ ಉಳ್ಳಾಲ್  ಅವರಿಗೆ ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿರುವ ತಿಳುವಳಿಕೆ ಹಾಗೂ ಅನುಭವ ಆಧಾರದಲ್ಲಿ ನೂತನ ಜವಾಬ್ದಾರಿಯನ್ನು ನೀಡಿರುವುದಾಗಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.