ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತ್ರಿವರ್ಣ ಧ್ವಜವನ್ನು ಏರಿಸಿ ಹಾರಿಸುವುದರೊಂದಿಗೆ ಭಾರತ್ ಜೋಡೋ ಯಾತ್ರೆಯು ಸಮಾರೋಪ ಕಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದ್ವೇಷ ರಾಜಕಾರಣವು ದೇಶವನ್ನು ಅವನತಿಗೆ ದೂಡುತ್ತದೆ ಎಂದರು. ಇಂದು ಮುಂಜಾನೆ ಗಾಂಧೀಜಿಯವರ ಪುಣ್ಯ ತಿಥಿಯ ನಮನವನ್ನು ರಾಹುಲ್ ಸಲ್ಲಿಸಿದರು.

ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಟ್ವೀಟ್ ಮಾಡಿ, ಶ್ರೀನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ದೇಶದ ಬಾವುಟ ಹಾರಿಸಿ ಭಾಜೋಯಾ ಸಮಾರೋಪ ಮಾಡಲಿದ್ದ ರಾಹುಲ್ ಗಾಂಧಿಯವರು ಅದನ್ನು ಕೆಂಪು ಚೌಕದಲ್ಲಿ ನೆರವೇರಿಸಿ ಸಾಹಸ ಮೆರೆದಿದ್ದಾರೆ ಎಂದಿದ್ದಾರೆ.