ಒಡಿಶಾದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋಪಾಲ ದಾಸ್ ಎನ್ನುವವರು ಒಡಿಶಾದ ಆರೋಗ್ಯ ಸಚಿವ ನಬ ದಾಸ್ ಎಂಬವರನ್ನು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ನಬ ದಾಸ್ ಅವರು ಬೃಜರಾಜನಗರದಲ್ಲಿ ಆಗಿದ್ದ ಪುರಸಭೆಯ ಹೊಸ ಕಟ್ಟಡಗಳ ಉದ್ಘಾಟನೆಗೆ ಬಂದ ವೇಳೆ, ಅವರು ಕಾರಿನಿಂದ ಇಳಿಯುವಾಗಲೆ ಆರೋಪಿ ಗುಂಡು ಹಾರಿಸಿದ್ದಾನೆ. ಕೂಡಲೆ ಸಚಿವರನ್ನು ಭುಬನೇಶ್ವರದ ಅಪೋಲೋ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ. ಕಾರಣ ಎದೆಯ ಭಾಗದಲ್ಲೇ ಗುಂಡು ದೇಹ ಹೊಕ್ಕಿತ್ತು.
ಇದೇ ಸಂದರ್ಭದಲ್ಲಿ ಎಎಸ್ಐ ಅತಿ ರಕ್ತದೊತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.