ಅನೇಕರು ಅನೇಕ ಸಂದರ್ಭಗಳಲ್ಲಿ ಮನಸ್ಸಿನಲ್ಲಿ ಹೀಗೆ ತನ್ನನ್ನು ತಾನೆ ದ್ವೇಷಿಸುತ್ತ ತನ್ನ ಭಾವನೆಗಳನ್ನ ವ್ಯಕ್ತಪಡಿಸಲಾಗದೆ..ಒಂದು ನಕಾರಾತ್ಮಕ ಯೋಚನೆ ನಮ್ಮೊಳಗೆ ಸೇರಿ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ. ಇಂತಹ ಭಾವನೆ ಒಮ್ಮೆಯಾದರೂ ಪ್ರತಿಯೊಬ್ಬರಿಗೂ ಕಾಡಿರುತ್ತದೆ.ಈಗ ನಾನು ನನ್ನನ್ನ ದ್ವೇಷಿಸುವ ಭಾವನೆ ಪೂರ್ತಿಯಾಗಿ ನಮ್ಮನ್ನ ಆವರಿಸಿ ಆ ದ್ವೇಷ ಖಿನ್ನತೆಗೆ ದೂಡುವ ಮುನ್ನ i hate my self ಎಂದು ನಮ್ಮ ಮನಸ್ಸಿಗೆ ಪೂರ್ತಿ ನಮ್ಮ ವಿರುದ್ಧ ಮಾಡುವ ಮುನ್ನ ನನ್ನನ್ನ ನಾನು ದ್ವೇಷಿಸುವುದೇಕೆ ?ಇದಕ್ಕೆ ಕಾರಣವೇನು ? ಎಂದು ನಮ್ಮನ್ನ ನಾವೆ ಪ್ರಶ್ನಿಸಿಕೊಳ್ಳೊಣ... 

ನಾನು ನನ್ನನ್ನು ದ್ವೇಷಿಸುತ್ತೆನೆ ಏಕೆಂದರೆ ನಾನು ನನ್ನ ಬಗ್ಗೆ ತುಂಬಾ ಯೋಚಿಸುತ್ತೆನೆ 

ಹ್ಮಾ..ನನ್ನ ನಾ ದ್ವೇಷಿಸೊಕೆ ಇದು ಕಾರಣ....

ಪ್ರತಿ ಸಾರಿ ನಮ್ಮನ್ನ ನಾವು ಇತರರೊಂದಿಗೆ ಹೊಲಿಕೆ ಮಾಡಕೊಳ್ಳುತ್ತೆವೆ..ನಮ್ಮ ಜೀವನ ಇತರರ ಜೀವನದ ಹಾಗಿಲ್ಲವೆಂಬ ಬಗ್ಗೆ ಅಥವಾ ಸೌಂದರ್ಯದ ಬಗ್ಗೆ ಒಂದು ಕೀಳರಿಮೆ ಹುಟ್ಟಿಸಿಕೊಂಡಿರುತ್ತೆವೆ ಇದರಿಂದ ಎಲ್ಲರೊಡನೆ ಬೆರೆಯಲಿಷ್ಟವಿಲ್ಲದೆ ಏಕಾಂತವನ್ನ ಇಷ್ಟ ಪಡಲಾರಂಭಿಸುತ್ತೆವೆ...

ಇಲ್ಲಿ ದ್ವೇಷಕ್ಕಿಂತ ನಮ್ಮ ಬಗ್ಗೆಯೇ ಟೀಕೆಗಳು ಎದ್ದು ಕಾಣುತ್ತಿದೆಯಲ್ಲವೇ...

ನಿಜ ಹೇಳಬೇಕೆಂದರೆ ಯಾರೂ ಕೂಡ ಮೊದಲಿನಿಂದಲೇ ನಮ್ಮನ್ನ ನಾವು ಟೀಕಿಸಿಕೊಳ್ಳುವುದು ಇಲ್ಲ ಇದಕ್ಕೆ ಅವರು ಬೆಳೆದು ಬಂದ ವಾತಾವರಣ ಹಾಗೂ ಅವರ ಸುತ್ತಮುತ್ತಲಿರುವವರು ಕಾರಣವಾಗಿರುತ್ತಾರೆ...ನಾವು ಹೇಗಿದ್ದೆವೆ ಎಂದು ಇನ್ನೊಬ್ಬರ ದೃಷ್ಟಿಕೋನದಿಂದ ತಮ್ಮನ್ನ ತಾವು ನೋಡುತ್ತಾರೆ ಇದೆ ನಾವು ಮಾಡುವ ತಪ್ಪು...ನಮ್ಮ ಸ್ವಂತ ಕಣ್ಣಿಂದ ನೋಡದೆ ಸಮಾಜವೆಂಬ ಕನ್ನಡಕ ಧರಿಸಿ ನೋಡತಿವಲ್ಲ ಅಲ್ಲಿ ನಮಗೆ ಯಾವುದು ಪರಫೆಕ್ಟ್ ಎನಿಸುವುದೆ ಇಲ್ಲ. ಇನ್ನೊಬ್ಬರ ಕೊರತೆಯನ್ನೆ ಕಾಣುವ ಕಣ್ಣಿಗೆ ಸರಿಯಾದದ್ದು ಕಾಣುವುದಿಲ್ಲ.

ಇಂತಹ ಉಪಯೋಗಕ್ಕೆಬಾರದವರ ಟೀಕೆಗಳನ್ನು ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ ತಮ್ಮನ್ನ ತಾವು ಟೀಕಿಸಿಕೊಳ್ಳುತ್ತ ಖಿನ್ನತೆಯಗೊಳಗಾಗುತ್ತಾರೆ

ಜೀವನದಲ್ಲಿ ನಾನಂದುಕೊಂಡಿರೊ ಗುರಿ ಮುಟ್ಟುವುದಕ್ಕಾಗಲಿಲ್ಲ...ನಾನು ಜೀವನದಲ್ಲಿ ಏನು ಆಗಲಿಲ್ಲ...ನಾನು ಕೂರುಪಿ ಎಂದು ಜೀವನದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಂಡು ನಿರುತ್ಸಾಹಿಗಳಾಗಿ ಉಳಿಯೊದಕ್ಕಿಂತ ನಮ್ಮ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಬೇಕು

ನಾವು ನಮ್ಮನ್ನ ದ್ವೇಷಿಸುವುದು  ಬಿಟ್ಟು ನಾವು ನಮ್ಮನ್ನ  ಮೊದಲು ಪ್ರೀತಿಸಿಕೊಳ್ಳಬೇಕು. 

ನಾವು ಹೇಗಿದಿವೋ  ಹಾಗೆ ನಮ್ಮನ್ನ ನಾವು  accept  ಮಾಡಬೇಕು

ನೋಡೋ  ದೃಷ್ಟಿ  ಚೆನ್ನಾಗಿ  ಇದ್ದರೆ .  ನೋಡುವುದೆಲ್ಲವೂ   ಸುಂದರವೇ .

ನಾವು ಇನ್ನೊಬ್ಬರ ಹಾಗೆ  ಯಾಕೆ  ಇಲ್ಲ  ಅನ್ಕೊಳೋದಕ್ಕಿಂತ. 

ನಮ್ ಹಾಗೆ  ಅವರು ಯಾಕೆ  ಇಲ್ಲ  ಅನ್ಕೊಳೋದು   ಉತ್ತಮ  ಅನ್ನಿಸುತ್ತದೆ. 

ಟೀಕೆ ಗಳಿಗೆ  ಕಿವಿ ಕೊಡದೆ ಅವರ ಯೊಗ್ಯತೆಯ ತಕ್ಕಂತೆ ಮಾತಾಡತಾರೆ  ಎಂದು ನಕ್ಕು ಸುಮ್ಮನೆ  ಇದ್ದು ಬಿಡಿ.

ಅದರ ಬಗ್ಗೆ ಯೋಚಿಸಿದಷ್ಟು  ನಾವು  ಖಿನ್ನತೆಗೆ  ಒಳಗಾಗುತ್ತೆವೆ.

i hate my self  ಎಂದು ಯೋಚಿಸುವ ಮುನ್ನ  ಹೀಗೂ ಯೋಚಿಸಬಹುದಲ್ಲ

i know what i am and im perfect in my own wold

- ಅಂಜಲಿ ಶಿದ್ಲಿಂಗ್