News by Rons Bantwal

ಮುಂಬಯಿ, ನ. 21: ನಟ, ರಂಗ ನಿರ್ದೇಶಕ ರಹೀಂ ಸಚೆರಿಪೇಟೆ ಅವರ ತನಿಂ ಫಿಲ್ಮ್ಸ್ ನಿರ್ಮಾಣದ ಹೆಸರಿಡದ (ಪ್ರೊಡಕ್ಷನ್ ನಂಬರ್ ವನ್) ಚೊಚ್ಚಲ ತುಳು ಚಲನಚಿತ್ರ ಈಗಾಗಲೇ ಎರಡು ಹಂತಗಳಲ್ಲಿ ಚಿತ್ರೀಕರಣ ಗೊಂಡಿದ್ದು, ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಿಯಾಗುತ್ತಿದೆ. ರಂಗ ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ ಅವರ ಸಮರ್ಥ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಈ ಚಿತ್ರ ನಾಗರಾಜ್ ಗುರುಪುರ ಅವರ ನಾಟಕ ಆಧಾರಿತ ಆಗಿದೆ. ವಿದ್ದು ಉಚ್ಚಿಲ್ ಅವರ ಕತೆ ಸಂಭಾಷಣೆಯ ಈ ಚಿತ್ರ ಚಿತ್ರೀಕರಣ ಹಂತದಲ್ಲೇ ವಿಭಿನ್ನ ರೀತಿಯ ಚಿತ್ರ ಆಗಲಿದೆ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಅಭಿನಂದನಾರ್ಹ.

ತುಳುನಾಡಿನ ಉಡುಪಿ ಹತ್ತಿರದ ಪಿಲಾರ್ ಪರಿಸರದ ಆಸುಪಾಸಿನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಆರ್ಥಿಕ ತಜ್ಞ,  ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ ಇತ್ತೀಚೆಗೆ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಅವರನ್ನು ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ತಂಡದ ಪರವಾಗಿ ಗೌರವಿಸಿದರು. ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ, ವಿದ್ದು ಉಚ್ಚಿಲ್  ಹಾಗೂ ಚಿತ್ರದ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು.