Image Source: Mint
ಮುಂಬಯಿಯ ಐಐಟಿ- ಭಾರತೀಯ ತಂತ್ರಜ್ಞಾನಗಳ ವಿದ್ಯಾಲಯದ ವಿದ್ಯಾರ್ಥಿಗಳ ಒಂದು ತಂಡವು ಮಡಚುವ ಇ- ಬೈಕ್ ತಯಾರಿಸಿದ್ದು ಅದರ ಮೊದಲ ಪರೀಕ್ಷೆ ಯಶಸ್ವಿಯಾಗಿದೆ.
ಮಹೀಂದ್ರಾ ಗುಂಪು ಈ ಸ್ಟಾರ್ಟ್ ಅಪ್ ಯೋಜನೆಗೆ ಹಣ ಹೂಡಿಕೆ ಮಾಡಿದೆ. ಗುಂಪಿನ ಅಧ್ಯಕ್ಷ ಆನಂದ ಮಹೀಂದ್ರಾ ಈ ಹಾರ್ನ್ ಬ್ಯಾಕ್ ಎಕ್ಸ್ 1 ಇ- ಬೈಕ್ ಪರೀಕ್ಷೆ ತನ್ನ ಮನೆಯ ಆವರಣದಲ್ಲೇ ನಡೆಸಿದರು. ಅದರ ವೀಡಿಯೋ ಜಾಲ ತಾಣಗಳಲ್ಲಿ ಹರಡಿದ್ದಾರೆ.
ಇದನ್ನು ಸುಲಭವಾಗಿ ಮಡಚಬಹುದು. ಮಡಚಿ ಹೊತ್ತುಕೊಂಡು ಹೋಗಬೇಕಿಲ್ಲ. ಒಂದು ಕೈಯಲ್ಲಿ ತಳ್ಳಿಕೊಂಡು ಹೋಗಬಹುದು.