ಮೈಸೂರು ಎಚ್.ಡಿ.ಕೋಟೆ ಮೂಲದ ಬೆಂಗಳೂರು ಪರಪ್ಪನ ಅಗ್ರಹಾರ ನಾಗನಾಥಪುರದ 50ರ ಗಣೇಶ್ ತನ್ನ ಮಗಳನ್ನು ಮರ್ಯಾದಾ ಹತ್ಯೆ ನಡೆಸಿ ಪೋಲೀಸರ ಅತಿಥಿ ಆಗಿದ್ದಾರೆ.

ಗಣೇಶ್ ಮಗಳು 17ರ ಪಲ್ಲವಿ ಪಿಯುಸಿ ಓದುತ್ತಿದ್ದು, ಅಲ್ಲಿ ಮನೋಜ್ ಎಂಬವನನ್ನು ಪ್ರೀತಿಸಿದ್ದಳು. ಇದನ್ನು ಖಂಡಿಸಿದ ತಂದೆ, ಕಾಲೇಜಿಗೆ ಹೋಗದಂತೆ ತಡೆದಿದ್ದ. ಮಗಳು ಕೊನೆಗೆ ಓಡಿಹೋಗಿದ್ದಳು. ಪೋಲೀಸರ ಸಹಾಯದಿಂದ ಆಕೆಯನ್ನು ಮನೆಗೆ ಕರೆತಂದು ಕೂಡಿ ಹಾಕಿದ್ದ. ಭಾನುವಾರ ಮಗಳು ಮತ್ತೆ ಓಡಿ ಹೋಗಿರುವುದಾಗಿ ದೂರು ನೀಡಿದ್ದ. ಪೋಲೀಸರ ತನಿಖೆಯಿಂದ ಮಾರಕಾಸ್ತ್ರಗಳಿಂದ ತಂದೆಯೇ ಮಗಳನ್ನು ಕೊಂದಿರುವುದು ತಿಳಿದು ಬಂದಿದೆ.