ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಆಚಾರ್ಯ ಮಠ ಆವರಣದಲ್ಲಿ ೧೦೨ ವರ್ಷಗಳಿಂದ ಆಚರಿಸಲ್ಪಟ್ಟ ಇತಿಹಾಸ ಪ್ರಸಿದ್ಧ ಮಂಗಳೂರು ಶಾರದಾ ಮಹೋತ್ಸವದ ೧೦೩ ನೇ ವರ್ಷದ ಪ್ರಯುಕ್ತ ಇಂದು ಬೆಳಗ್ಗೆ ಶ್ರೀ ಶಾರದಾ ಮಾತೆಯ ಮೃತಿಕಾ ವಿಗ್ರಹದ ಪ್ರತಿಷ್ಠಾಪನೆ ಇಂದು ನೆರವೇರಿತು . ಈ ಸಂದರ್ಭದಲ್ಲಿ ಶಾರದಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ