ಚಿಕ್ಕಮಗಳೂರು, ಜನವರಿ 25:- ನಗರಸಭಾ ಸದಸ್ಯ ಸಿ.ಪಿ.ಲಕ್ಷ್ಮಣ್ ಹಾಗೂ ಅವರ ಪುತ್ರ ನಟರಾಜ್ ಅವರ ಮೇಲೆ ನಿನ್ನೆ ನಡೆದಿರುವ ಹಲ್ಲೆಯನ್ನು ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್. ದೇವರಾಜ್ ಉಗ್ರವಾಗಿ ಖಂಡಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು ಮೂರು ಬಾರಿ ನಗರಸಭಾ ಚುನಾವಣೆಯಲ್ಲಿ ಸಿ.ಪಿ.ಲಕ್ಷ್ಮಣ್ ಅವರ ಕುಟುಂಬ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣ ನಡೆದು ಎರಡು ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ದುರ್ದೈವದ ಸಂಗತಿ.

ಪ್ರಥಮ ಬಾರಿ ನಗರಸಭಾಗೆ ಅಧ್ಯಕ್ಷರಾಗಿರುವ ವರಸಿದ್ದಿ ವೇಣುಗೋಪಾಲ್ ಅವರು ಕನಿಷ್ಟ ಕಾಳಜಿಗಾದರೂ ನಗರಸಭಾ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಗಮನಹರಿಸಿಲ್ಲ. ಕೇವಲ ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಲ್ಲೆ ನಡೆದು ಎರಡು ದಿನ ಕಳೆದರೂ ಇದುವರೆಗೂ ಭೇಟಿ ನೀಡಿಲ್ಲ. ತಾವು ಅಧ್ಯಕ್ಷರಾಗಿ ನಗರಸಭಾ ಸದಸ್ಯರಿಗೆ ನೀಡಿದ ಕೊಡುಗೆ ಇದೇನಾ ಎಂದು ಪ್ರಶ್ನಿಸಿದ್ದಾರೆ.

ನಗರಸಭಾ ಅಧ್ಯಕ್ಷರು ಅಭಿವೃದ್ದಿ ಪೂರಕ ಹಾಗೂ ಜವಾಬ್ದಾರಿಯುತವಾಗಿ ಕೆಲಸ ಮಾಡುವ ಬದಲು ಗೂಂಡಾಗಿರಿ ಪೂರಕ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೂಡಲೇ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಮೂಲಕ ಹಲ್ಲೆಗೊಳಗಾಗಿರುವ ಸಿ.ಪಿ.ಲಕ್ಷ್ಮಣ್ ಹಾಗೂ ಅವರ ಪುತ್ರ ನಟರಾಜ್ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನದೇ ರೀತಿಯಲ್ಲಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.