ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52ನೇ ಕಣ್ಣೂರು ವಾರ್ಡಿನ ಬಲ್ಲೂರು ಗುಡ್ಡೆಯಲ್ಲಿ ಅತಿಯಾದ ಮಳೆಯಿಂದ ಸುಮಾರು 15 ಮನೆಗಳು ಅಪಾಯದ ಅಂಚಿನಲ್ಲಿದ್ದು, ಇನ್ನೂ ಸತತ ಸುರಿಯುವ ಮಳೆಯಿಂದ ಮತ್ತಷ್ಟು ಮಣ್ಣು ಕುಸಿತಗೊಳ್ಳುವುದು ಖಚಿತವಾಗಿದ್ದು, ನೀರು, ವಿದ್ಯುತ್ ಮತ್ತು ಇತರ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ನಗರಪಾಲಿಕೆಯಿಂದ ರಚನೆಗೊಂಡ ಗೋಡೆ ಕುಸಿತಗೊಂಡಿದ್ದು, ನಷ್ಟವುಂಟಾಗಿದ್ದು, ಎಲ್ಲ ಮನೆಯವರನ್ನು ಸ್ಥಳಾಂತರಿಸಿ, ಅವರ ದಿನನಿತ್ಯದ ಆರ್ಥಿಕ ಸ್ಥಿತಿ ಕೂಡ  ಚಿಂತಾಜನಕವಾಗಿದೆ. ಸ್ಥಳಕ್ಕೆ ಕೂಡಲೇ ಜಿಲ್ಲಾಧಿಕಾರಿ ಮತ್ತು ಸರಕಾರಿ ಅಧಿಕಾರಿಯವರು ಭೇಟಿ ನೀಡಿ, ಪರಿಹಾರ ಒದಗಿಸಿಕೊಡಬೇಕೆಂದು, ಸ್ಥಳಕ್ಕೆ ಭೇಟಿ ನೀಡಿ ಫೆÇೀನ್ ಮುಖಾಂತರ ಮಾಜಿ ಶಾಸಕ ಶ್ರೀ ಐವನ್ ಡಿ ಸೋಜರವರು ಜಿಲ್ಲಾಧಿಕಾರಿ ಮತ್ತು ನಗರ ಪಾಲಿಕೆ ಕಮಿಷನರ್‍ರವರಿಗೆ ಸಂಪರ್ಕಿಸಿ ಒತ್ತಾಯಿಸಿದ್ದಾರೆ ಮತ್ತು ಸೂಕ್ತ ವ್ಯವಸ್ಥೆ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ. 

    ಈ ಸಂದರ್ಭದಲ್ಲಿ  ವಾರ್ಡಿನ ಅಧ್ಯಕ್ಷರಾದ ರಫೀಕ್ ಇ.ಕೆ., ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ಖಾದರ್, ಹಬಿಬುಲ್ಲ ಕಣ್ಣೂರು, ಮಹಮ್ಮದ್ ಶರೀಫ್ ಬಲ್ಲೂರು ಗುಡ್ಡೆ, ಇಂತಿ ಕಾಬ್ ಬೀಡು, ಸಲೀಂ ಮುಕ್ಕ, ಹಸನ್ ಪಳ್ನೀರ್, ಇಂತಿ ಬಲ್ಲೂರು ಗುಡ್ಡೆ, ನೌಶಾದ್ ಬಲ್ಲೂರು ಗುಡ್ಡೆ, ದಾವುದ್, ರಿಯಾಜ್ ಕಣ್ಣೂರು ಹಾಗೂ ಇತರರು ಉಪಸ್ಥಿತರಿದ್ದರು.