ಇಡಿ- ಜಾರಿ ನಿರ್ದೇಶನಾಲಯವು ಫೆಮಾ- ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಬಿಬಿಸಿ ಇಂಡಿಯಾ ಮೇಲೆ ಮೊಕದ್ದಮೆ ಹೂಡಿದೆ.

2023ರ ಜನವರಿಯಲ್ಲಿ ಬಿಬಿಸಿಯವರು 2002ರ ಗುಜರಾತ್ ಸಂಬಂಧ 'ಇಂಡಿಯಾ: ದ ಮೋದಿ ಕ್ವಶ್ಚನ್' ಎಂಬ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರು.

ಫೆಬ್ರವರಿಯಲ್ಲಿ ಆದಾಯ ತೆರಿಗೆ ಇಲಾಖೆಯವರು ಬಿಬಿಸಿ ಇಂಡಿಯಾದ ದಿಲ್ಲಿ, ಮುಂಬಯಿ ಕಚೇರಿಗಳ ಮೇಲೆ ದಾಳಿ ಮಾಡಿದರು.

ಲಾಭವನ್ನು ನಿಯಮ ಮೀರಿ ಮೂಲ‌ ಬಿಬಿಸಿಗೆ ಕಳುಹಿಸಿದ್ದೀರಿ ಎಂದು ಈಗ ಪ್ರಕರಣ ಹೂಡಲಾಗಿದೆ.