ಮೂಡುಬಿದಿರೆ: ಸ್ವಸ್ತಿಶ್ರೀ  ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವು ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಜಗದ್ಗುರು ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾ ಸ್ವಾಮೀಜಿಯವರ ಪಾವನ ಸಾನಿಧ್ಯ ದಲ್ಲಿ ಜರುಗಿತು.  ಯುವ ಉದ್ಯಮಿಯಾದ  ನವ್ಯ ತೇಜಸ್ ಇವರು ಧ್ವಜಾರೋಹಣವನ್ನು ನೆರವೇರಿಸಿದರು. 

ಸ್ವಾತಂತ್ರ್ಯ ಎಂದರೇ ಕೇವಲ ಒಂದು ದಿನದ ಆಚರಣೆ ಅಲ್ಲ ಅದನ್ನು ಇಂದಿನ ಯುವ ಪೀಳಿಗೆ ಜೀವನದಾದ್ಯಂತ ಪಾಲಿಸಬೇಕು ಎಂದು ಮಕ್ಕಳಿಗೆ ಹಿತವಚನವನ್ನು ಹೇಳಿದರು. ಹಾಗೆಯೇ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಾಗೂ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರು ನ್ಯಾಯವಾದಿಗಳು ಆದ ಶ್ವೇತಾ ಇವರು ಮಾತನಾಡುತ್ತಾ. ಸ್ವಾತಂತ್ರ್ಯ ಎಂದರೆ ಸಂಭ್ರಮ ಸ ಡಗರ ಸ್ವಾತಂತ್ರ್ಯಕ್ಕೋಸ್ಕರ ನಮ್ಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರು ಹಾಗೂ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು ಯಾವ ರೀತಿ ಹೋರಾಡಿದರು ಎಂಬುದನ್ನು ಮನವರಿಕೆ ಮಾಡಿಕೊಟ್ಟರು ಅದೇ ರೀತಿ ಸ್ವಾತಂತ್ರ್ಯ ಎಂಬುವುದನ್ನು ಮಕ್ಕಳು ಸ್ವೇಚೆಯಾಗಿ ಬಳಸಿಕೊಳ್ಳಬಾರದು ಎಂಬುದಾಗಿ ಮಕ್ಕಳಿಗೆ ಕಿವಿ ಮಾತನ್ನು ಹೇಳಿದರು. ಪೂಜ್ಯ ಸ್ವಾಮೀಜಿ ಅವರು ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಎಲ್ಲವೂ ಅತಿ ಅಮೂಲ್ಯವಾದದು ಪ್ರತಿ ಕ್ಷಣವನ್ನು ನಾವು ಆನಂದಿಸುತ್ತ ಜೀವಿಸಬೇಕು ಎಂದರು ಮಕ್ಕಳಿಗೆ ಸ್ಥಳೀಯ  ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಿಕೊಟ್ಟರು. ಉಪನ್ಯಾಸಕ ರಾದ ಸರಸ್ವತಿ ಹಾಗೂ ಸುಜಾತ ಇವರು ಸ್ವಾತಂತ್ರ್ಯ ದಿನಾಚರಣೆಯ  ಬಗ್ಗೆ ಮಾತನಾಡಿದರು ಕಾಲೇಜಿನ  ಪ್ರಾಂಶುಪಾಲರಾಗಿದ್ದ ಸ್ವರ್ಗೀಯ ಪಾ ಅನಂತರಾಜ ಇಂದ್ರ ಇವರ ಸ್ಮರಣಾರ್ಥ ಮಕ್ಕಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕರಾದ ಸುಷ್ಮಾ ಇವರು ಧನ್ಯವಾದವಿತ್ತರು. ಉಪನ್ಯಾಸಕರ ಹಿತೇಶ್ ರಾವ್ ಇವರು ಕಾರ್ಯಕ್ರಮ ನಿರೂಪಿಸಿದರು.