ಸಾರ್ವಜನಿಕರ ಗಮನಕ್ಕೆ ತಾರದೆಯೇ ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ತನ್ನ ಕಾರ್ಯ ಸೂಚಿ ತೂರಿಸುತ್ತಿರುವ ಎನ್‌ಸಿಇಆರ್‌ಟಿ ಈಗ 11ನೇ ತರಗತಿಯ ಪೊಲಿಟಿಕಲ್ ಸಯನ್ಸ್ ಪಾಠದಲ್ಲಿ ಇದ್ದ ಮೌಲಾನಾ ಅಬುಲ್ ಕಲಂ ಆಜಾದ್ ಹೆಸರನ್ನು ತೆಗೆದು ಹಾಕಿದೆ.
11ನೇ ತರಗತಿಯ ಪಠ್ಯದ 'ಸಂವಿಧಾನ ಯಾಕೆ ಮತ್ತು ಹೇಗೆ ಅಧ್ಯಾಯದಲ್ಲಿ ಎಂಟು ಸಮಿತಿಗಳ ಮುಖ್ಯಸ್ಥರ ಹೆಸರು ಮತ್ತು ಅವರು ಕೆಲವರ ನಡುವೆ ವೈರುಧ್ಯ ಇದ್ದರೂ ಒಟ್ಟಾಗಿ ಸಂವಿಧಾನ ರಚಿಸಿದ ವಿವರ ಇದೆ. ಅದರಲ್ಲಿ ಆಜಾದ್‌ರ ಹೆಸರನ್ನು ಮಾತ್ರ ಬಿಡಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಆಜಾದ್‌ರು ಆರು ವರುಷ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಬ್ರಿಟಿಷ್ ಸಂಪುಟ ಮಿಶನ್ ಜೊತೆಗೆ ನಡೆಸಿದ ಮಾತುಕತೆ ಪ್ರಾಮುಖ್ಯತೆ ಪಡೆದಿದೆ.
ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾದ ಅವರು 14ರ ಪ್ರಾಯದ ವರೆಗೆ ಕಡ್ಡಾಯ ಶಿಕ್ಷಣ, ನಾನಾ ತಂತ್ರಜ್ಞಾನ, ವಿಜ್ಞಾನ ಶಿಕ್ಷಣ ಸಂಸ್ಥೆಗಳು, ಶಿಲ್ಪಶಾಸ್ತ್ರ ಶಾಲೆ ಮೊದಲಾದವನ್ನು ಆರಂಭಿಸಿದವರು.
ಅಲ್ಪಸಂಖ್ಯಾತ ಪಿಎಚ್.ಡಿ., ಎಂ.ಫಿಲ್. ವಿದ್ಯಾರ್ಥಿಗಳಿಗೆ ನಿಧಿ ಸಹಾಯದ ಮೌಲಾನಾ ಆಜಾದ್ ಫೆಲೋಶಿಪ್ 2009ರಲ್ಲಿ ಆರಂಭಿಸಿದ್ದನ್ನು ಮೋದಿ ಸರಕಾರ ಕಳೆದ ವರುಷ ನಿಲ್ಲಿಸಿತ್ತು.