2,000 ಕೋಟಿ ರೂಪಾಯಿಗಳ ಒಡೆಯ ಎನಿಸಿದ ಪರಾಗ್ ದೇಸಾಯಿ(49) ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೂ ಫಲ ಕಾಣದೆ ಸೋಮವಾರ ಕೊನೆಯುಸಿರೆಳೆದರು. ಅವರ ತಲೆಗೆ ತೀವ್ರ ಪೆಟ್ಟಾಗಿತ್ತು.

ಅಹಮದಾಬಾದಿನಲ್ಲಿ ಅವರ ಹಿರಿಯರು ಸ್ಥಾಪಿಸಿದ್ದ ವಾಘ್ ಬಕ್ರಿ ಚಾ ಬ್ರಾಂಡನ್ನು ಪರಾಗ್ ದೇಸಾಯಿ ಕಳೆದೊಂದು ದಶಕದಲ್ಲಿ ದೇಶಮಟ್ಟದ್ದಾಗಿಸುವಲ್ಲಿ ಯಶಸ್ವಿಯಾಗಿದ್ದರು.

ಬೆಳಿಗ್ಗೆ ವಾಕಿಂಗ್ ಮಾಡುವಾಗ ಬೀದಿ ನಾಯಿಯೊಂದು ಅಟ್ಟಿಸಿಕೊಂಡು ಬಂದುದರಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ ದೇಸಾಯಿ ಆಸ್ಪತ್ರೆ ಸೇರಿದ್ದರು. ಆದರೆ ಈ ಬೀದಿ ನಾಯಿ ಅಟ್ಟಿಸಿಕೊಂಡು ಬಂದುದನ್ನು ಕೆಲವರು ನಂಬುತ್ತಿಲ್ಲ. ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.