ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರ ಅದ್ಯಕ್ಷತೆಯಲ್ಲಿ ಮಂಗಳೂರಿನ ಮಿಲಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಆಗಸ್ಟ್ 02, 2024 ರಂದು ಕೊಂಕಣಿ ಎಂ.ಎ ಹಾಗೂ ಕೊಂಕಣಿ ಭಾಷೆ ಅಧ್ಯಯನದ ಕುರಿತು ಮಂಗಳೂರು ವಿಶ್ವವಿದ್ಯಾನಿಲ(MU)ಯದ ಉಪಕುಲಪತಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಅಕಾಡೆಮಿ ಅಧ್ಯಕ್ಶರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಈ ಸಭೆಯ ಅಗತ್ಯತೆಗಳನ್ನು ಸವಿಸ್ತಾರವಾಗಿ ತಿಳಿಸಿ ಅತಿಥಿಗಳಿಗೆ ಹೂವು ಗುಚ್ಛ ನೀಡಿ ಸ್ವಾಗತ ಕೋರಿದರು.

ಕೊಂಕಣಿಯ ಪ್ರಸಿದ್ಧ ಸಾಹಿತಿಗಳಾದ ಡಾ. ಎಡ್ವರ್ಡ್ ನಜ್ರೆತ್‌ರವರು ಪ್ರಸ್ತಾವನೆಯ ಭಾಷಣದಲ್ಲಿ ಪ್ರಸ್ತುತ ಕೊಂಕಣಿ  M.A.ಯ ಗೊಂದಲಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ನಂತರ ಈ ಸಂವಾದದಲ್ಲಿ ಪಾಲ್ಗೊಂಡವರು ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಸ್ಟೀವನ್ ಕ್ವಾಡ್ರಸ್, ರೇಮಂಡ್  ಡಿಕುನ್ಹ, ಪ್ರೀತಿ ಡಿಸೋಜ, ಜಯವಂತ್ ನಾಯ್ಕ್, ವೆಂಕಟೇಶ್ ಬಾಳಿಗ, ಫಾ| ಮೈಕಲ್ ಸಾಂತುಮಾಯೆರ್ ಇವರುಗಳು ಅವರವರ ವಿಚಾರಗಳನ್ನು ಮಂಡಿಸಿದರು.

ಮಂಗಳೂರು ಯುನಿವರ್ಸಿಟಿಯ ಉಪ ಕುಲಪತಿಯವರಾದ ವಿ.ಎಲ್.ಧರ್ಮರವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಜರಿದ್ದು ಕೊಂಕಣಿ ಕಲಿಕೆ ಹಾಗೂ ಅಧ್ಯಯನ ಪೀಠದ ಬಗ್ಗೆ ಮಾಹಿತಿಯನ್ನು ನೀಡಿ ಕೊಂಕಣಿಯ ಮುಖಂಡರ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ನೀಡಿದರು. ಮುಂದಿನ ದಿನಗಳಲ್ಲಿ ಕೊಂಕಣಿ ಪೀಠ ಹಾಗೂ ಕೊಂಕಣಿ M.A. ಎರಡೂ ವಿಷಯಗಳ ಬಗ್ಗೆ ಯುನಿವರ್ಸಿಟಿಯ ವತಿಯಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಕಾರ್ಯಕ್ರಮಕ್ಕೆ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ| ಮೈಕಲ್ ಸಾಂತುಮಾಯೆರ್‌ರವರು ಹಾಜರಿದ್ದು ಸಭಾಂಗಣವನ್ನು ಉಚಿತವಾಗಿ ನೀಡಿದ್ದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಶರಾದ ಎರಿಕ್ ಒಝೇರಿಯೊರವರು ಹಾಗೂ ಕೊಂಕಣಿಯ 25 ಮುಖಂಡರು ಹಾಜರಿದ್ದರು.