ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಇಲ್ಲಿಯ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಸಪ್ಟೆಂಬರ್ 28 ರಂದು ಹೊಸಂಗಡಿಯಿಂದ ಪಡ್ಡಂದಡ್ಕ ದವರೆಗೆ ರಾಜ್ಯ ಹೆದ್ದಾರಿ ಸ್ವಚ್ಛತಾ ಅಭಿಯಾನ ಮತ್ತು ಬಸ್ ನಿಲ್ದಾಣ ಸೆಚ್ಚತೆಯನ್ನು ಫ್ರೆಂಡ್ಸ್ ಕ್ಲಬ್ (ರಿ) ಹೊಸಂಗಡಿ, ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡಬಿದ್ರಿ, ಇನ್ನರ್ವೀಲ್ ಕ್ಲಬ್ ಮೂಡಬಿದ್ರಿ, ರೋಟರಿ ಕ್ಲಬ್ ಸಿದ್ಧಕಟ್ಟೆ , ರೋಟರಿ ಕ್ಲಬ್ ಮಿಡ್ ಟೌನ್ ಮೂಡಬಿದ್ರಿ , ಲಯನ್ಸ್ ಕ್ಲಬ್ ವೇಣೂರು, ರೋಟಾರೆಕ್ಟ್ ಕ್ಲಬ್ ಮೂಡಬಿದ್ರಿ, ಹೊಸಂಗಡಿ ಗ್ರಾಮ ಪಂಚಾಯತ್ ಹಾಗೂ ಶ್ರೀ ಮಹಾವೀರ ಕಾಲೇಜು ಎನ್ ಎಸ್ ಎಸ್ ಘಟಕದ ಜಂಟಿ ಆಶ್ರಯದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಪ್ರಾಯೋಜಕಾರದ ಹೊಸಂಗಡಿ ಗ್ರಾಮ ಪಂಚಾಯತ್ ಪಿಡಿಒ ಗಣೇಶ್ ಶೆಟ್ಟಿ, ಅಧ್ಯಕ್ಷರಾದ
ಜಗದೀಶ್ ಹೆಗ್ಡೆ , ಸದಸ್ಯರಾದ ಹರಿಪ್ರಸಾದ್ ಪಿ, ಹಾಗೂ ಊರವರು ಹಾಗೆಯೇ ಮಹಾವೀರ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ಯೋಜನಾಧಿಕಾಯಾದ ಶಾರದಾ , ಕಾಲೇಜಿನ ಸಂದೀಪ್ ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿಗಳು ಪಾಲ್ಗೊಂಡರು..