ಲೊರೆಟ್ಟೊ, ಬಂಟ್ವಾಳ: ನವೆಂಬರ್ 21 ರಂದು ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಲೊರೆಟ್ಟೊ ಸಿ.ಬಿ.ಎಸ್.ಸಿ ಶಾಲೆಯ 23 ವಿದ್ಯಾರ್ಥಿಗಳು ಭಾಗವಹಿಸಿ, ಕಟಾ ಹಾಗೂ ಕುಮಿಟೆ ಕಲರ್ ಬೆಲ್ಟ್ ವಿಭಾಗದಲ್ಲಿ 13 ಚಿನ್ನ, 12 ಬೆಳ್ಳಿ ಮತ್ತು 8 ಕಂಚಿನ ಪದಕ ಹಾಗೂ ತಂಡ ಪ್ರಶಸ್ತಿಯನ್ನು ಗಳಿಸಿರುತ್ತಾರೆ.

ಲೊರೆಟ್ಟೊ ಸಿ.ಬಿ.ಎಸ್.ಸಿ ಶಾಲೆಯ ಪ್ರಾಂಶುಪಾಲರಾದ ರೆ| ಫಾ| ಜೆಸನ್ ವಿಜಯ್ ಮೊನಿಸ್ ಕರಾಟೆ ತರಗತಿಯ ಉಸ್ತುವಾರಿಗಳಾದ ಫಿಲೊಮೆನ್ ಪಿಂಟೊ ಹಾಗೂ ಕರಾಟೆ ತರಬೇತುದಾರರಾದ ಸೆನ್‍ಸಾಯಿ ರೆನ್ಸಿ ಜೆರಾಲ್ಡ್ ಫೆರ್ನಾಂಡಿಸ್ ಪದಮಲೆ ಇವರು ಉಪಸ್ಥಿತರಿದ್ದರು.
ಈ ಯಶಸ್ಸಿಗೆ ಶ್ರಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಕರಾಟೆ ತರಬೇತುದಾರರಿಗೆ ಶಾಲಾ ಸಂಚಾಲಕರಾದ ವಂ| ಫಾ| ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಸಿ.ಬಿಎಸ್.ಸಿ. ಶಾಲೆಯ ಪ್ರಾಂಶುಪಾಲಾರಾದ ವಂ| ಫಾ| ಜೆಸನ್ ವಿಜಯ್ ಮೊನಿಸ್ ಶಾಲಾ ಸಿಬಂಧಿ ವರ್ಗ ಹಾಗೂ ಶಾಲಾ ಆಡಳಿತ ಮಂಡಳಿಯವರು ಅಭಿನಂದನೆಗಳನ್ನು ಸಲ್ಲಿಸಿದರು.