ಮೂಲ್ಕಿ: ಭಜನೆಯ ಮೂಲಕ ಭಗವಂತನನ್ನು ಕಾಣಲು ಸಾಧ್ಯವಿದ್ದು ಕುಣಿತ ಭಜನೆಯಿಂದ ಮಾನಸಿಕ ಹಾಗೂ ದ್ಯೆಹಿಕ ಬೆಳವಣಿಗೆ ಸಾಧ್ಯವೆಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ ಅವರು ಹೇಳಿದರು.
ಅವರು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿರುವ ಬರಹ ಕೋಚಿಂಗ್ ಸೆಂಟರ್ ವತಿಯಿಂದ ಆರಂಭಗೊಂಡ ಬರಹ ಕುಣಿತಾ ಭಜನೆಯ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಭಜನಾ ತರಗತಿಯ ಶಿಕ್ಷಕ ಅಶೋಕ್ ನಾಯ್ಕ್ ರವರು ಕುಣಿತ ಭಜನೆಯ ಬಗ್ಗೆ ಮಾಹಿತಿ ನೀಡಿದರು. ಗಿರಿಧರ್ ಅಮೀನ್ ಕಾರ್ನಾಡು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬರಹ ಕೋಚಿಂಗ್ ಸೆಂಟರ್ ನ ಮುಖ್ಯಸ್ತೆ ಬಿಂದಿಯಾ ಸಾಲ್ಯಾನ್ ಸ್ವಾಗತಿಸಿದರು.