ಅಸಂಬದ್ಧವಾಗಿ ತಂದೆಯ ಬಗೆಗಿನ ಮಾಹಿತಿ ಮೇಲೆ ನಮ್ಮನ್ನು ತಿರಸ್ಕರಿಸಿ, ನಮಗಿಂತ ಕಡಿಮೆ ಅಂಕದವರನ್ನು ಶಿಕ್ಷಕರಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಅಕ್ಷತಾ ಚೌಗಲಾ ಮತ್ತು 90ಕ್ಕೂ ಹೆಚ್ಚು ಮಹಿಳೆಯರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಮಾಡಿದ ಜಸ್ಟಿಸ್ ಎನ್. ನಾಗಪ್ರಸನ್ನ ಅವರಿದ್ದ ಉಚ್ಚ ನ್ಯಾಯಾಲಯದ ಒಂಟಿ ಪೀಠವು 1:1ರ ಆಯ್ಕೆ ಪಟ್ಟಿಯನ್ನು ರದ್ದು ಮಾಡಿತು.
ಪ್ರಾಥಮಿಕ ಶಾಲೆಯ 6- 8ನೆಯ ತರಗತಿಯವರಿಗೆ ಕಲಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 15,000 ಶಿಕ್ಷಕರ ಆಯ್ಕೆ ಪಟ್ಟಿ ಮಾಡಿತ್ತು. ಅದರಲ್ಲಿ ಆಯ್ಕೆ ಆದವರಲ್ಲಿ ಹಲವರ ಅಂಕ ತಮಗಿಂತ ಕಡಿಮೆ ಇರುವುದನ್ನು ಕಂಡು ಮಹಿಳೆಯರು ತಕರಾರು ಅರ್ಜಿ ಸಲ್ಲಿಸಿದ್ದರು. ಡಿಡಿಪಿಐ ಕಚೇರಿಯು ಇವರ ವಕೀಲರಿಗೆ ಸದರಿ ಮಹಿಳೆಯರು ತಮ್ಮ ಗಂಡನ ಅಪ್ಪಂದಿರ ಜಾತಿ ಮತ್ತು ಆದಾಯ ಪತ್ರ ಲಗತ್ತಿಸಿದ್ದುದರಿಂದ ಅವರ ಅರ್ಜಿ ತಿರಸ್ಕರಿಸಲಾಗಿದೆ ಎಂದರು. ಹಾಗಾದರೆ ಇನ್ನೂ ತಂದೆಯ ಸುಪರ್ದಿಯಲ್ಲಿರುವ ಮಹಿಳೆಯರು ಏನು ಮಾಡಬೇಕು ಎಂದು ಕೋರ್ಟಿಗೆ ಕೇಳಲಾಯಿತು.
ನ್ಯಾಯಮೂರ್ತಿಗಳು ಕೂಡಲೆ ತಂದೆಯ ಜಾತಿ ಹಾಗೂ ಆದಾಯ ಪತ್ರ ಲಗತ್ತಿಸಿದವರ ಅರ್ಜಿಗಳನ್ನು ಪರಿಗಣಿಸಿ ಎರಡನೆಯ ಆಯ್ಕೆ ಪಟ್ಟಿ ಪ್ರಕಟಿಸಿ ಎಂದು ಆಜ್ಞಾಪಿಸಿತು. ಹಾಲಿ 15,000 ಶಿಕ್ಷಕರ ನೇಮಕಾತಿಯನ್ನು ರದ್ದು ಪಡಿಸಿತು.