ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಸಹಿತ ರಾಜ್ಯದ 100 ಕ್ಷೇತ್ರಗಳಲ್ಲಿ ಎಸ್‌ಡಿಪಿಐ- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸ್ಪರ್ಧಿಸಲಿದೆ ಎಂದು ಪಕ್ಷದ ಅನ್ಸಾರ್ ಕೊಡ್ಲಿಪೇಟೆ ತಿಳಿಸಿದರು.
ಪಕ್ಷದ ಪದಾಧಿಕಾರಿಗಳಲ್ಲಿ ಬಂಟ್ವಾಳದಲ್ಲಿ ಇಲ್ಯಾಸ್ ತುಂಬೆ, ಬೆಳ್ತಂಗಡಿಯಲ್ಲಿ ಅಕ್ಬರ್, ಮೂಡಬಿದಿರೆಯಲ್ಲಿ ಅಲ್ಫಾನ್ಸೊ ಫ್ರಾಂಕ್ ಸ್ಪರ್ಧಿಸುವರು. ಉಳಿದ ಕ್ಷೇತ್ರಗಳಿಗೆ ಸ್ಪರ್ಧಿಗಳನ್ನು ಫೆಬ್ರವರಿಯಲ್ಲಿ ಅಂತಿಮಗೊಳಿಸುವುದಾಗಿ ಅವರು ಹೇಳಿದರು.