ಕಳೆದ ವರುಷ ಸುರತ್ಕಲ್‌ನಲ್ಲಿ ನಡೆದ ಮೊಹಮ್ಮದ್ ಫಾಜಿಲ್ ಕೊಲೆಯನ್ನು ಸಮರ್ಥಿಸಿಕೊಂಡ ಹಿಂದುತ್ವ ಗುಂಪಿನ ಶರಣ್ ಪಂಪ್‌ವೆಲ್ ಅವರನ್ನು ಕೂಡಲೆ ಬಂಧಿಸುವಂತೆ ಫಾಜಿಲ್‌ರ ತಂದೆ ಉಮರ್ ಫಾರೂಕ್ ಅವರು ಕಮಿಶನರ್ ಎನ್. ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕಮಿಶನರ್ ಈ ಸಂಬಂಧ ಪರಿಶೀಲಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದ ಮಾಜೀ ಮಂತ್ರಿ ಯು. ಟಿ. ಖಾದರ್ ಅವರು ಇವರನ್ನೆಲ್ಲ ಗಡಿಪಾರು ಮಾಡಬೇಕು. ಸಾವನ್ನು ಸಂಭ್ರಮಿಸುವ, ದ್ವೇಷವನ್ನು ಉಸಿರಾಡುವ ಬಿಜೆಪಿ ರಾಜಕೀಯವನ್ನು ಅವರು ಖಂಡಿಸಿದರು.
ಅದಕ್ಕೆ ಮೊದಲು ಶರಣ್ ಪಂಪ್‌ವೆಲ್ ತುಮಕೂರು ಹಿಂದೂ ಸಮಾವೇಶದಲ್ಲಿ ಮಾತನಾಡುತ್ತ ಎಲ್ಲೋ ನಡೆದ ಹಿಂದೂ ಕೊಲೆಗೆ ಪ್ರತೀಕಾರವಾಗಿ ಫಾಜಿಲ್ ಕೊಲೆ ಮಾಡಿರುವುದು ಸರಿ ಎಂದು ಮಾತನಾಡಿದ್ದರು.