ಜನವರಿ 31ರ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸಂಸತ್ತನ್ನು ಉದ್ದೇಶಿಸಿ ಈ ಬಾರಿ ನಾರೀ ಶಕ್ತಿ ಎಂದು ಒತ್ತಿ ಹೇಳಿದರು. ಉಳಿದಂತೆ ರಾಷ್ಟ್ರಪತಿಯವರ ಭಾಷಣವು ಮೋದಿ ಸರಕಾರ ತಯಾರಿಸಿ ಕೊಟ್ಟುದಾಗಿದೆ.

ಆಯವ್ಯಯಕ್ಕೆ ಮುನ್ನುಡಿಯಾಗಿ ಹಣಕಾಸು ಸಚಿವೆ 2022- 23ರ ಹಣಕಾಸು ಸಮೀಕ್ಷೆಯ ಸಂಸತ್ತಿನ ಮುಂದಿಟ್ಟರು. ವರುಷದ ಎಲ್ಲ ಹಣಕಾಸು ಆಗು ಹೋಗು ಕೃಷಿ ಕೈಗಾರಿಕೆಗಳಿಂದ ಹಿಡಿದು ವಿದೇಶಿ ವಿನಿಮಯದವರೆಗಿನ ಅಂಕಿ ಅಂಶಗಳು ಇದರಲ್ಲಿ ಇರುತ್ತವೆ. ಹಣಕಾಸು ಸಚಿವಾಲಯದ ಹಣಕಾಸು ಸಂಬಂಧಿ ವಿಭಾಗವು ದೇಶದ ಹಣಕಾಸಿನ ನೀಲ ನಕ್ಷೆ ಎನ್ನುವ ಇದನ್ನು ತಯಾರಿಸುತ್ತಿದೆ.

ಇದು ಬಜೆಟ್ ಅಧಿವೇಶನ ಆಗಿದ್ದು, ಆಯವ್ಯಯ ಮಂಡನೆ ಆಗಬೇಕು. ಪ್ರಧಾನಿ ಮೋದಿಯವರು ನಮ್ಮ ಬಜೆಟನ್ನು ಇಡೀ ಜಗತ್ತು ಎದುರು ನೋಡುತ್ತಿದೆ ಎಂದರು. ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಖೋತಾ ಮತ್ತು ಹೊರೆಯ ಬಜೆಟ್ ಹೊರತು ಇನ್ನೇನೂ ಬಾರದು ಎಂದರು.