ಮಂಗಳೂರು,(ಡಿಸೆಂಬರ್ 5): ವಿದ್ಯಾರ್ಥಿಗಳು ಅಂಬೇಡ್ಕರ್‍ರವರ ಜೀವನ ಕ್ರಮವನ್ನು ಅರ್ಥೈಸಿಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಬರುವುದರ ಜೊತೆಗೆ ಮೇಲು ಕೀಳು ಎಂಬ ಭಾವನೆ ಇಲ್ಲದೆ ಅಂಬೇಡ್ಕರ್ ಪ್ರೇರಣೆಯ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬೇಕೆಂದು ಸಿಂಡಿಕೇಟ್‍ನ ಸದಸ್ಯ ರವಿಚಂದ್ರ ಪಿ.ಎಮ್, ಕರೆಕೊಟ್ಟರು.
ಅವರು ನಗರದ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಡಾ. ಬಿ.ಆರ್ ಅಂಬೇಡ್ಕರ್ ಪುಣ್ಯ ತಿಥಿ ಅಂಗವಾಗಿ ‘ಸಾಮರಸ್ಯ ದಿನದ ಆಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಖ್ಯ ವಕ್ತಾರ ಕುದ್ರೋಳಿ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ಮಾತನಾಡಿ ಪ್ರಸ್ತುತ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್‍ರವರ ಶೈಕ್ಷಣಿಕ ಸಾಮಾಥ್ರ್ಯಮತ್ತು ಜಗತ್ತು ಅವರನ್ನು ಮೆಚ್ಚುಕೊಂಡಿರುವ ಶೈಲಿ ನಮಗೆಲ್ಲರಿಗೂ ಮಾದರಿಯಾಗಬೇಕೆಂದು ಹಲವಾರು ವಾಸ್ತವಿಕ ಉದಾಹರಣೆಗಳನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಮಾತನಾಡಿ ವಿದ್ಯಾರ್ಥಿಗಳು ತರಗತಿಯ ನಾಲ್ಕು ಗೋಡೆಗಳ ಒಳಗೆ ಬಂದಿಯಾಗಿರದೆ ರಾಷ್ರ್ಟಕ್ಕಾಗಿ ದುಡಿದ ಮಹಾನ್ ಚೇತನರುಗಳಾದ ಡಾ.ಬಿ. ಆರ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿಯೂ ಹೆಚ್ಚಿನ ಅಧ್ಯಯನ ಮಾಡಿ, ಉತ್ತಮ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ. ಶಿವರಾಮ ಪಿ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ಡಾ.ತೆರೆಜ್ ಪಿರೇರಾ ಹಾಗೂ. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.