ಮಂಗಳೂರು: ಸ್ವತಂತ್ರ ಭಾರತಕ್ಕೆ ಏಕತೆ, ಸಮಾನತೆ, ಅಖಂಡತೆ, ಧಾರ್ಮಿಕ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾವಲಂಬನೆ ಮುಂತಾದವುಗಳನ್ನು ಒಳಗೊಂಡ ಸಂವಿಧಾನವನ್ನು ಅರ್ಪಿಸಿದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಹೇಳಿದರು. ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿದ ಅಂಬೇಡ್ಕರ್ ರವರ 64ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು.
ಅಂಬೇಡ್ಕರ್ ರವರ ದೂರದೃಷ್ಟಿತ್ವದ ಸಂವಿಧಾನವನ್ನು ಇಂದು ದೇಶದಲ್ಲಿ ಬಿಜೆಪಿ ನಾಯಕರು ಬದಲಾಯಿಸುವ ಹೇಳಿಕೆಯನ್ನು ನೀಡುತ್ತಿರುವುದು ತೀರಾ ದುರದೃಷ್ಟಕರ. ನಾವೆಲ್ಲರೂ ಮುಂದಕ್ಕೆ ಸಂವಿಧಾನದ ರಕ್ಷಣೆಗೆ ಹೋರಾಟವನ್ನು ಮಾಡುವ ಅನಿವಾರ್ಯತೆ ಬಂದೊದಗಿದೆ ಎಂದವರು ತಿಳಿಸಿದರು.
ಸಭೆಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಹಿರಿಯ ಮುಖಂಡ ಟಿ.ಹೊನ್ನಯ್ಯ, ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ, ಮ.ನ.ಪಾ ಸದಸ್ಯರಾದ ನವೀನ್ ಡಿಸೋಜಾ, ಅನಿಲ್ ಕುಮಾರ್, ಸೇವಾದಳದ ಮುಖ್ಯಸ್ಥ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಮ.ನ.ಪಾ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ರವೂಫ್ ಸ್ವಾಗತಿಸಿದರು. ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಕೇಶವ ಮರೋಳಿ, ಮಾಜಿ ಮೇಯರ್ ಕೆ.ಹರಿನಾಥ್, ಸಂಶುದ್ದೀನ್ ಬಂದರ್, ಮಂಜುಳಾ ನಾಯ್ಡು, ರಘುರಾಜ್ ಕದ್ರಿ, ಪದ್ಮನಾಭ ಅಮೀನ್, ಪ್ರೇಮ್ ಬಲ್ಲಾಳ್ ಭಾಗ್, ಗಿರೀಶ್ ಶೆಟ್ಟಿ, ಸಿ.ಎಂ. ಮುಸ್ತಫಾ, ಮಲ್ಲಿಕಾರ್ಜುನ, ಚೇತನ್ ಕುಮಾರ್, ವಹಾಬ್ ಕುದ್ರೋಳಿ, ಯು.ಎಚ್.ಖಾಲಿದ್, ನಝೀರ್ ಬಜಾಲ್, ಸಮರ್ಥ್ ಭಟ್, ಎ.ಆರ್.ಇಮ್ರಾನ್ ಮುಂತಾದವರು ಉಪಸ್ಥಿತರಿದ್ದರು.