ಮಂಗಳೂರು, ಡಿಸೆಂಬರ್07: ಇದೇ ಡಿಸೆಂಬರ್ 18ರಂದು ಶ್ರೀನಿವಾಸ ಸಭಾಂಗಣದಲ್ಲಿ ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು ಎಂಬ ಗ್ರಂಥ ಬಿಡುಗಡೆ ಆಗಲಿದ್ದು ಅದರಲ್ಲಿ ದೇಶ ವಿದೇಶಗಳ 123 ಬ್ಯಾರಿ ಸಾಧಕರ ಪರಿಚಯ ಇರುತ್ತದೆ, ಮೊದಲ ಪರಿಚಯ ಬಪ್ಪ ಬ್ಯಾರಿ ಅವರದು ಎಂದು ಉಚ್ಚಿಲ್ ವಿವರಿಸಿದರು. ಗ್ರಂಥವನ್ನು ಅಕ್ಷರ ಸಂತ ಹಾಜಬ್ಬ ಬಿಡುಗಡೆ ಮಾಡುವರು. ಈ ಸಂದರ್ಭದಲ್ಲಿ ಬ್ಯಾರಿ ಹಿರಿಯರ ಬಗೆಗಿನ ಡಿವಿಡಿ ಸಾಕ್ಷ್ಯ ಚಿತ್ರ ಕೂಡ ಹೊರ ಬರಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜೀ ಅಧ್ಯಕ್ಷ ಹರಿಕೃಷ್ಣ ಪುನರೂರು ಅದನ್ನು ಬಿಡುಗಡೆ ಮಾಡುವರು. ವಿಶೇಷ ಎಂದರೆ ಬ್ಯಾರಿ ಅಕಾಡೆಮಿ ಪ್ರಕಟಿಸುವ ಪುಸ್ತಕಗಳಲ್ಲಿ ಅರ್ಧದಷ್ಟನ್ನು ಸಕಲಿಯಾ ಜೋಕಟ್ಟೆ ಖರೀದಿಸಿ ಶಾಲೆಗಳಿಗೆ ಹಂಚಲಿರುವ ಮಾಹಿತಿಯು ಸಕಾರಾತ್ಮಕ ಆದುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಪೂರ್ಣಿಮಾ, ಪುಸ್ತಕ ಆಯ್ಕೆ ಸಮಿತಿಯ ಅಹ್ಮದ್ ಬಾವಾ, ಅಕಾಡೆಮಿ ಸದಸ್ಯ ಸಂಶೀರ್ ಬುಡೋಳಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಉಪಸ್ಥಿತರಿದ್ದರು.