ಮಂಗಳೂರು: ಉಳ್ಳಾಲ್ತಿ ಆರಾಧನೆಯ ವಿಶಿಷ್ಟ ಮಾಹಿತಿಯನ್ನು ಒಳಗೊಂಡ ಉಳಿಯ ಗ್ರಾಮ ಚರಿತ್ರೆಯ "ಉಳ್ಳಾಲ ಉಳಿಯದ ಉಳ್ಳಾಲ್ತಿ ಧರ್ಮ ಅರಸರು " ಕ್ಷೇತ್ರ ಪರಿಚಯ ಗ್ರಂಥ ಲೋಕಾರ್ಪಣೆ ಉಳ್ಳಾಲ ಉಳಿಯ ಕ್ಷೇತ್ರದ ಅನಂದೋತ್ಸವ ವೇದಿಕೆಯಲ್ಲಿ ಜರಗಿತು. ದೈವಜ್ಞ ಶ್ರೀರಂಗ ಐತಾಳ, ಧರ್ಮದರ್ಶಿ ದೇವು ಮೂಲ್ಯಣ್ಣ, ಮಾಜಿ ಆಡಳಿತ ಮೊಕ್ತೇಶ್ವರ ಯು. ಎಸ್. ಪ್ರಕಾಶ್ ಕೃತಿ ಬಿಡುಗಡೆ ಮಾಡಿದರು.

"ನೇತ್ರವತಿ ನದಿಯಲ್ಲಿ ಇರುವ ಎಡ ಪಾಶ್ವದಲ್ಲಿ ಉಳ್ಳಾಲದ ಸಣ್ಣ ದ್ವೀಪ ಉಳಿಯ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಉಳಿಯ ಕ್ಷೇತ್ರದಲ್ಲಿ ಶಬರ ರೂಪದ ಶಿವ ಪಾರ್ವತಿಯರು ಅಣ್ಣ ತಂಗಿಯರಾಗಿ ಪ್ರತ್ಯೇಕ ಎರಡು ಮಾಡಗಳಲ್ಲಿ ನೆಲೆಯಾದ ಪಾರ್ದನ ಆಧಾರಿತ ಕಥೆ -ನಂಬಿಕೆಯ ವಿಚಾರ ಗಳನ್ನು ಬೇರೆ ಬೇರೆ ಮೂಲಗಳಿಂದ ಸoಗ್ರಹಿಲಾಗಿದೆ."
ಕ್ಷೇತ್ರದ ತಂತ್ರಿ ವಾಮಂಜೂರು ಅನಂತ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ, ದೇವು ಮೂಲ್ಯಣ್ಣ ಅವರ ಗೌರವ ಸಂಪಾದಕತ್ವದಲ್ಲಿ ಕದ್ರಿ ನವನೀತ ಶೆಟ್ಟಿ ಅವರು ಪ್ರಧಾನ ಸಂಪಾದಕರಾಗಿ ಗ್ರಂಥ ರಚನೆ ಮಾಡಿದ್ದಾರೆ.
ಕ್ಷೇತ್ರ ಅಭಿವೃದ್ಧಿ, ಬ್ರಹ್ಮ ಕಲಶ ಹಾಗೂ ಕ್ಷೇತ್ರ ಸಂಬಂಧಿ ಚಿತ್ರಗಳನ್ನು ಒಳಗೊಂಡ ಸುಮಾರು 200 ಪುಟಗಳ ಸಂಗ್ರಹ ಯೋಗ್ಯ ಕೃತಿ ಇದು.
ಜನವರಿ 14 ರಂದು ಉಳಿಯ ಪಡುಮಾಡದಲ್ಲಿ ಹೂವಿನ ಹಾಸಿಗೆ ಸೇವೆ ಇದ್ದು ಅಂದು ಪ್ರಕಟಣೆ ಪೂರ್ವ ಪುಸ್ತಕ ಕಾದಿರಿಸಿದ ಭಕ್ತರಿಗೆ ವಿತರಣೆ ಮಾಡಲಾಗುವುದು ಎಂದು ಪ್ರಕಾಶಕ ಉಳಿಯತ್ತಾಯ ಸೇವಾ ಸಮಿತಿಯ ಆನಂದ ಮೆಂಡನ್ ತಿಳಿಸಿದ್ದಾರೆ.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಮೇಶ್ ಮೆಂಡನ್, ಬ್ರಹ್ಮ ಕಳಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಕುಮಾರ್ ಕುತ್ತಾರ್, ಪ್ರಧಾನ ಕಾರ್ಯದರ್ಶಿ ರವಿಶಂಕರ್ ಸೋಮೇಶ್ವರ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜೇಶ್ ಉಳಿಯ ಹಾಗೂ ಗುರ್ಕಾರರು ಉಪಸ್ಥಿತರಿದ್ದರು.
ಡಾ. ಅರುಣ್ ಉಳ್ಳಾಲ್ ಕೃತಿ ಪರಿಚಯ ಮಾಡಿದರು. ಜೀವನ್ ಉಳ್ಳಾಲ್ ನಿರ್ವಹಿಸಿದರು.