ಉಡುಪಿ : ಮೀನುಗಾರಿಕಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕಾ ಪರವಾನಗಿ ಹಾಗೂ ಡೀಸಿಲ್ ಪಾಸ್ ಪುಸ್ತಕ ಪಡೆಯಲು ದೋಣಿ ಮಾಲೀಕರಿಂದ ವೆಬ್‌ಸೈಟ್ https://frims.kar.nic.in/dieselpermitನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಧಕ್ಕೆಯಲ್ಲಿ ನಿಲುಗಡೆಯಾಗಿರುವ ಜಿಲ್ಲೆಯ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳ ಭೌತಿಕ ಪರಿಶೀಲನೆಗೆ ರಚಿಸಲಾದ ತಂಡಗಳು, ದೋಣಿಗಳ ಭೌತಿಕ ಪರಿಶೀಲನೆಯನ್ನು ಕೈಗೊಂಡು ಗೂಗಲ್ ಶೀಟ್‌ನಲ್ಲಿ ಯಾಂತ್ರೀಕೃತ ದೋಣಿಗಳ ವಿವರವನ್ನು ಫೋಟೋ ಹಾಗೂ ದಾಖಲೆಯೊಂದಿಗೆ ಅಪ್‌ಲೋಡ್ ಮಾಡಿರುತ್ತಾರೆ.ಈ ಪರಿಶೀಲನಾ ಪಟ್ಟಿಯು ಜಿಲ್ಲೆಯ ಎಲ್ಲಾ ಡೀಸಿಲ್ ಬಂಕ್‌ಗಳಲ್ಲಿ ಮತ್ತು ಪ್ರಾಧಿಕೃತ ಅಧಿಕಾರಿಗಳ ಕಛೇರಿಯಲ್ಲಿ ಲಭ್ಯವಿದ್ದು, ಯಾವುದೇ ಬೋಟುಗಳ ವಿವರಗಳು ನೈಜ ಕಾರಣಗಳಿಂದ ಬಿಟ್ಟು ಹೋಗಿದ್ದಲ್ಲಿ ಅಂತಹ ಬೋಟಿನ ಮಾಲೀಕರು ಸಂಬಂಧಿತ ಅಥಾರೈಸ್ಡ್ ಆಫೀರ‍್ಸ್ಗೆ ಕಾರಣಗಳನ್ನು ಒದಗಿಸಿ, ಮನವಿ ನೀಡಿ ಜುಲೈ 31 ರ ಒಳಗೆ ಪರಿಶೀಲನೆಗೆ ಒಳಪಡಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಡೀಸಿಲ್ ವಿತರಣೆ ಕೇಂದ್ರ ಅಥವಾ ಮೀನುಗಾರಿಕಾ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
