ಪ್ರಧಾನಿ ಕಾಳಜಿ ನಿಧಿಯು ಸರಕಾರದ್ದಲ್ಲ, ಸಾರ್ವಜನಿಕವಾದುದು ಎಂದು ಪ್ರಧಾನಿ ಕಚೇರಿಯು ಇಂದು ದಿಲ್ಲಿ ಹೈಕೋರ್ಟಿಗೆ ಅಫಿಡವಿಟ್ ಸಲ್ಲಿಸಿತು. ಸಂಸತ್ತಿನ ಆದೇಶ ಇಲ್ಲವೇ ಸಂವಿಧಾನದ ವಿಧಿಯಂತೆ ಪ್ರಧಾನಿ ಕಾಳಜಿ ನಿಧಿ ಸ್ಥಾಪನೆ ಆಗಿಲ್ಲ. ಅದು ಸಾರ್ವಜನಿಕ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಸರಕಾರದ ಹಣವಾಗಲಿ, ಹತೋಟಿಯಾಗಲಿ ಅದರ ಮೇಲೆ ಇಲ್ಲ. ವ್ಯಕ್ತಿಗತವಾಗಿ ಮತ್ತು ಸಂಸ್ಥೆಗಳಿಂದ ದೇಣಿಗೆ ಪಡೆದು ಲೆಕ್ಕ ಇಟ್ಟು ಹಂಚಲಾಗುತ್ತದೆ. 1961ರ ಆದಾಯ ತೆರಿಗೆ ಕಾಯ್ದೆ ಪ್ರಕಾರ ಈ ಫಂಡ್ ತೆರಿಗೆ ವಿನಾಯಿತಿ ಪಡೆದಿದೆ ಎಂದೂ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.