ಎಲ್ಲಾ ನನ್ನ ಓದುಗ ಮಿತ್ರರಿಗೇ ಗುರು ಹಿರಿಯರಿಗೆ ಶುಭ ಮುಂಜಾನೆ. ಓದುಗರೇ ನನ್ನ ಇವತ್ತಿನ ಲೇಖನದ ವಿಷಯ ಮಾತು ಈ ಮಾತು ಅಂತ ಬಂದಕೂಡಲೇ ನನಗೆ ಕೆಲವು ಮಾತಿಗೆ ಸಂಭಂದಿಸಿದ ಅದ್ಭುತ ವಾಕ್ಯಗಳು ಗಾದೆಮಾತುಗಳು ನೆನಪಿಗೆ ಬರುತ್ತವೆ. ಮಾತು ಮನೇನು ಕಟ್ಟುತ್ತೆ ಮಾತು ಮನೆಯನ್ನು ಕೆಡುವತ್ತೇ ಬಿಟ್ಟ ಬಾಣ ಆಡಿದ ಮಾತು ಮರಳಿ ಬರೋಲ್ಲ ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಮಾತು ಬೆಳ್ಳಿ ಮೌನ ಬಂಗಾರ ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಹೇಳುತ್ತಾ ಹೋದರೆ ಸಾಕಷ್ಟು ಇತರಹದ ವಾಕ್ಯಗಳು ಗಾದೆಮಾತುಗಳು ತುಂಬಾ ಇದೆ.. ಮಾತು ನಮಗೆ ಗೌರವ ಸನ್ಮಾನ ಯಶಸ್ಸು ಕೂಡ ಕೊಡುತ್ತೆ ಅದೇ ಮಾತು ಸ್ವಲ್ಪ ಹೆಚ್ಚು ಕಮ್ಮಿ ಆದ್ರೆ ಅಗೌರವ ಅವಮಾನ ಅಪಕೀರ್ತಿ ಅಸಫಲತೆ ನು ಕೊಡುತ್ತೆ...ದೊಣ್ಣೆಯಿಂದ ಹೊಡೆದರು ನೋವಾಗಲ್ಲ ಆದರೆ ಮಾತಿನ ಪೆಟ್ಟು ಬಹಳ ತೀವ್ರವಾಗಿರುತ್ತದೆ.ಮನಸ್ಸನ್ನು ಘಾಸಿಗೊಳಿಸುತ್ತದೆ. ಕೆಲವು ಜನರ ಮಾತಿನ ಧಾಟಿಯೇ ಹಾಗೇ ಮಾತನಾಡುವ ಮದ್ಯೆ ವ್ಯಂಗ್ಯ ಮಾತುಗಳನ್ನ ಆಡುವದು ಚುಚ್ಚು ಮಾತುಗಳನ್ನ ಆಡುವದು. ಅಭ್ಯಾಸ. ಆದರೆ ಇದು ಸರಿ ಅಲ್ಲಾ.
ನನಗೆ ಈ ಮಾತಿನ ವಿಷಯ ಬಂದಾಗ ದ್ವಿತೀಯ ಪಿ ಯು ಸಿ ಹಿಂದಿ ಪಠ್ಯಕ್ರಮದಲ್ಲಿ ಬರುವ ರಹೀಮ್ ದಾಸ್ ರ ದೋಹಾದಲ್ಲಿ ಒಂದು ಮಾತಿಗೆ ಸಂಭಂದ ಪಟ್ಟ ದೋಹಾ ಇದೆ ಅದು ರಹಿಮನ್ ಜಿಭಾ ಬಾವರಿ, ಕಹೀ ಗಯೀ ಸರಗ, ಪಾತಾಲ ಆಪು ತೋ ಕಹೀ ಭೀತರ ರಹೀ, ಜೂತಿ ಖಾತ ಕಪಾಲ, ದೋಹಾ ಸಾರ : ರಹೀಮ್ ದಾಸ್ ರು ಹೇಳುತ್ತಾರೆ ಮನುಷ್ಯ ನಾಲಿಗೆ ಬಹಳ ಕೆಟ್ಟದ್ದು ಅದು ಹೊರಗಡೆ ಬಂದು ಒಳ್ಳೇದು ಕೆಟ್ಟದ್ದು ಏನು ಬೇಕೋ ಅದನ್ನ ಮಾತನಾಡಿ ತಾನು ಒಳಗೆ ಹೋಗಿ ಕುತ್ಕೊಂಡು ಬಿಡುತ್ತದೆ. ಆದರೆ ಅದರ ತಪ್ಪಿನ ಶಿಕ್ಷೆಯು ಮನುಷ್ಯನ ಕೆನ್ನೆ ಮನಸ್ಸು ಹಾಗೂ ತಲೆಗೆ ಸಿಗುತ್ತದೆ ಎಂದು. ಹೇಳುತ್ತಾರೆ
ಎಂಥಹ ಅದ್ಬುತವಾದ ಮಾತು ನೋಡಿ ಈ ಮಾತು ಸತ್ಯಕೂಡ ಹೌದು. ನಾಲಿಗೆ ಪಟ ಪಟ ಅಂತ ಏನು ಬೇಕೋ ಅದನ್ನ ಹೇಳಿಬಿಡುತ್ತೆ ಆದರೆ ಅದರ ಪರಿಣಾಮ ಕೆನ್ನೆ ಮನಸ್ಸು ತಲೆಗೆ ಬಿರುತ್ತದೆ ಮಾತಿಂದ ಕೆನ್ನೆಗೇ ಹೊಡೆತ ಬೀಳುತ್ತೆ ಮನಸ್ಸು ಕೆಡುತ್ತೆ ತಲೆ ಗೇ ಅತಿಯಾದ ಒತ್ತಡ ಚಿಂತೆ. ಒಟ್ನಲ್ಲಿ ಮನುಷ್ಯನ ನೆಮ್ಮದಿ ಹಾಳಾಗೋದು ಖಂಡಿತ.ಅದಕ್ಕೆ ಹಿರಿಯರು ಗುರುಗಳು ಹೇಳೋದು ಯೋಚಿಸಿ ಮಾತನಾಡು ಅಂತ. ಮಾತು ಬರುತ್ತೆ ಅಂತ ಹೇಗೆ ಬೇಕೋ ಹಾಗೇ ಮಾತನಾಡಬಾರದು.
ಮಾತಿಗೆ ಅದ್ಬುತ ಶಕ್ತಿ ಇದೆ.ಮಾತಿನ ಮೂಲಕವೇ ಒಬ್ಬರ ಮನಸ್ಸು ಗೆಲ್ಲಬಹುದು. ಹಾಗೆಯೇ ಅದೇ ಮಾತಿನ ಮೂಲಕ ಒಬ್ಬರನ್ನು ಕೊಲ್ಲಲುಬಹುದು. ಪ್ರೀತಿಯ ಮಾತಿಗೆ ಮನಸ್ಸು ಶರಣಾದರೆ. ಕೆಟ್ಟ ಮಾತು ಮನಸ್ಸಿಗೆ ನೋವನ್ನು ಉಂಟುಮಾಡುತ್ತದೆ.ಎಲುಬಿಲ್ಲದ ನಾಲಿಗೆ ಎಂಬ ಮಾತಿದೆ.ಮನುಷ್ಯ ಮಾತನಾಡುವಾಗ ಯೋಚಿಸುವದಿಲ್ಲ.ಹಾಗೆಯೇ ತೋಚಿದನ್ನು ಹೇಳುತ್ತಾ ಹೋಗುತ್ತಾನೆ. ಅದೆಷ್ಟು ಸಲ ಅಂತಹ ಮಾತುಗಳು ಅವಾಂತರಕ್ಕೆ ಅನಾಹುತತ್ತಕ್ಕೆ ಕಾರಣವಾಗುತ್ತದೆ ಎಲ್ಲರೂ ಹೇಗೆ ಮತ್ತೊಬ್ಬರ ಮಾತಿಂದ ನಮಗೆ ನೋವಾಗುತ್ತೋ ಹಾಗೇ ನಮ್ಮ ಮಾತಿಂದ ಮುಂದೆ ಇರೋರಿಗೇ ನೋವು ಆಗುತ್ತೆ ಅಂತ ಯೋಚನೆ ಮಾಡುವದಿಲ್ಲ.ನಮ್ಮ ಮಾತುಗಳು ಮನಸ್ಸನ್ನು ಅಸ್ತವ್ಯಸ್ತಗೊಳಿಸಬಹದು.ಕೆಲವೊಮ್ಮೆ ಸಂಪೂರ್ಣ ಜೀವನ ಜಿಗುಪ್ಸೆ ಮೂಡಿಸಬಹುದು.
ಮತ್ತೊಬ್ಬರನ್ನು ನಿಂದಿಸುವ ಅಭ್ಯಾಸ ನಿಮ್ಮದಾಗಿದ್ದಾರೆ ಅದನ್ನ ಈ ಕ್ಷಣದಿಂದಲೇ ಬಿಟ್ಟುಬಿಡಿ.ಒಬ್ಬರನ್ನ ಅವಮಾನಿಸುವದನ್ನು ಬಿಟ್ಟು ಬಿಡಿ. ಯಾವದೇ ಕಾರಣಕ್ಕೂ ಒಬ್ಬರ ಮನಸ್ಸು ಒಡೆಯುವ ಮಾತುಗಳನ್ನು ಆಡಬೇಡಿ.ಮಾತು ಎಲ್ಲರನ್ನು ಜೋಡಿಸುವ ಪ್ರೀತಿಸುವ ಆತ್ಮೀಯತೆ ಬೆಳೆಯುವ ಸಾಧನವಾಗಬೇಕೆ ಹೊರತು ಇವನ್ನೆಲ್ಲ ನಾಶ ಮಾಡೋ ಆಯುಧ ಅಲ್ಲಾ. ಮಾತು ಅಮೃತನು ಹೌದು ವಿಷನು ಹೌದು ಅದನ್ನ ಅಮೃತ ಮಾಡ್ಬೇಕಾ ವಿಷ ಮಾಡ್ಬೇಕಾ ಅನ್ನೋದು ನಮ್ಮ ಕೈಯಲ್ಲಿ ಇದೆ. ಇದೆ ಮಾತುಗಳು ಕೆಲವೊಮ್ಮೆ ಒಳ್ಳೆಯ ವಾತಾವರಣವನ್ನು ಕೆಡಿಸಿಬಿಡುತ್ತದೆ.
ಮಾತು ಅನ್ನೋದು ಎಂತಹ ದೊಡ್ಡ ಅನಾಹುತ ಆಚಾತುರ್ಯ ಸೃಷ್ಟಿ ಮಾಡುತ್ತದೆ ಎಂದರೆ ಅದಕ್ಕೆ ಒಳ್ಳೆಯ ಉಧಾಹರಣೆ ಅಂದರೆ ಮಹಾಭಾರತ ದ್ರುಪದಿಯ ಒಂದು ಮಾತು. ಒಮ್ಮೆ ದುರ್ಯೋಧನ ಪಾಂಡವರ ಇಂದ್ರಪ್ರಸ್ಥವನ್ನು ನೋಡಲು ಬಂದಾಗ ಇಂದ್ರಪ್ರಸ್ಥದಲ್ಲಿ ಹೋಗುವಾಗ ನೀರನ್ನು ಮೆಟ್ಟಿಲು ಎಂದು ಭಾವಿಸಿ ಅದರ ಮೇಲೆ ಕಾಲು ಇಟ್ಟು ನಡೆಯಲು ಹೋದಾಗ ಕಾಲು ಜಾರಿ ಬೀಳುತ್ತಾನೆ. ಅದನ್ನ ದ್ರುಪದಿ ನೋಡಿ ಕುರುಡನ ಪುತ್ರ ಕುರುಡ ಅಂತ ಹೇಳಿ ನಗುತ್ತಾಳೆ.. ಇದೆ ಒಂದು ಮಾತಿಂದ ದುರ್ಯೋಧನನಿಗೆ ಅವಮಾನ ಆಗಿ ನೋವು ಆಗಿ ಆ ಮಾತಿನ ದ್ವೇಷ ಇಟ್ಕೊಂಡು ಪಾಂಡವರನ್ನು ಪಗಡೆ ಜೂಜಿನ ಆಟಕ್ಕೆ ಆಹ್ವಾನ ನೀಡಿ ಮೋಸದ ಆಟ ಆಡಿ ದ್ರುಪದಿಯ ವಸ್ತ್ರಹರಣದ ಹೇಯ್ ಕೃತ್ಯ ಮಾಡಿ ಅದು ಮುಂದೆ ಮಹಾಭಾರತದ ಯುದ್ಧದಲ್ಲಿ ಸಾವಿರಾರು ಜನರ ಸಾವಿನಲ್ಲಿ ಅಂತ್ಯ ಆಗುತ್ತೆ.. ದ್ರುಪದಿಯ ಆ ಒಂದು ಮಾತು *ಕುರುಡನ ಮಗ ಕುರುಡ* ಅನ್ನೋ ಈ ಮಾತಿಂದ ಅನೇಕರ ಸಾವು ಅನೇಕ ಹೆಣ್ಣುಮಕ್ಕಳು ಜೀವನ ಮಕ್ಕಳ ಜೀವನ ಹಾಳು ಆಗುತ್ತೆ. ನೋಡಿ ಸ್ನೇಹಿತರೆ ಒಂದು ಸಣ್ಣ ಮಾತು ಅನ್ನೋ ಕಿಡಿ ಎಂತಹ ಬೆಂಕಿಯನ್ನು ಹಚ್ಚಿ ಸುಟ್ಟು ಭೂದಿ ಮಾಡುತ್ತೇ.
ಅದಕ್ಕೆ ಸ್ನೇಹಿತರೆ ಮಾತನಾಡುವ ಮುನ್ನ ಯೋಚಿಸಿ ಮಾತನಾಡಿ. ನಮ್ಮ ಮಾತುಗಳು ಅಮೃತ ಔಷದಿ ಆಗಬೇಕೆ ಹೊರತು ವಿಷ ರೋಗವನ್ನು ನೀಡಬಾರದು.. ನಮ್ಮ ಈ ಮಾತು ಧರ್ಮದ ಕಾರ್ಯವನ್ನು ಮಾಡಿಸುತ್ತೇನೆ ಅಧರ್ಮದ ಕಾರ್ಯವನ್ನು ಮಾಡಿಸುತ್ತೇ... ನಮಗೆ ಮಾತು ಬರುತ್ತೆ ಅಂತ ಎಲ್ಲಿ ಬೇಕೋ ಅಲ್ಲಿ ಮಾತನಾಡಲು ಹೋಗಬಾರದು. ನಮ್ಮ ಮಾತಿಗೆ ಬೆಲೆ ಇರೋ ಜಾಗದಲ್ಲಿ ನಮ್ಮ ಮಾತಿನ ಅವಶ್ಯಕತೆ ಇರೋ ಜಾಗದಲ್ಲಿ ಮಾತ್ರ ನಾವು ಮಾತನಾಡಬೇಕು.... ಮಹಾಭಾರತದಲ್ಲಿ ದ್ರುಪದಿ ವಸ್ತ್ರಹರಣ ಮಾಡುವ ಸಮಯದಲ್ಲಿ ಅವಳ ಬಗ್ಗೆ ಅವಾಚ್ಯಶಬ್ದಗಳಿಂದ ಮಾತನಾಡುವ ಸಮಯದಲ್ಲಿ... ಭೀಷ್ಮರು ದ್ರೋಣಾಚಾರ್ಯರು ಕರ್ಣ ಇವರೆಲ್ಲ ಮೌನವಾಗಿ ಏನು ಮಾತನಾಡದೆ ಇರುವದೇ ಇವರ ಸಾವಿಗೆ ಕಾರಣವಯಿತು... ಜೀವನ ಪೂರ್ತಿ ಧರ್ಮದ ದಾರಿಯಲ್ಲಿ ಸಾಗಿ ಕೇವಲ ಒಂದು ಹೆಣ್ಣಿಗೆ ಅನ್ಯಾಯ ಆಗೋ ಸಮಯದಲ್ಲಿ ಯಾರೊಬ್ಬರೂ ಧ್ವನಿ ಎತ್ತದೆ ಮೌನವಾಗಿ ಇರುವದೇ ಅಧರ್ಮವಾಗಿ ಅವರ ಸಾವಿಗೆ ಆ ಘಟನೆ ಕಾರಣವಯಿತು. ಎಲ್ಲಾ ಕಡೆ ಮಾತನಾಡುವದು ತಪ್ಪು ಎಲ್ಲಾ ಕಡೆ ಮೌನವಾಗಿ ಇರುವದು ತಪ್ಪು
ಮಾತೇ ನಮ್ಮ ವ್ಯಕ್ತಿತ್ವವನ್ನು ರೂಪಿಸುವದು.
ಧನ್ಯವಾದಗಳು
ನವೀನ ಗೋಪಾಲಸಾ ಹಬೀಬ