ಚಿತ್ರ / ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ: ಬಾರಿಸು ಕನ್ನಡ ಡಿಂಡಿಮವ ಎಂಬಂತೆ ಬೊಂಬಾಯಿಯಲ್ಲಿ ಕನ್ನಡದ ಡಿಂಡಿಮವ ಬಾರಿಸಿದ ಹಿರಿಮೆ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಗೆ ಸಲ್ಲುತ್ತದೆ. ನಮ್ಮಸಂಘದ ಕಾರ್ಯವೈಖ್ಯರವನ್ನು ಕನ್ನಡಿಗರೆಲ್ಲರೂ ಕಾತರದಿಂದ ಕಾಯಿತ್ತಿರುವ ಮಟ್ಟಿಗೆ ಈ ಸಂಘ ಬೆಳೆದಿದೆ. ನಾವು ಸಮಾಜ ಸೇವೆ ಮಾಡಲಿಪ್ಛಿಸುವುದಾದರೆ ಸ್ವಯಂಪ್ರೇರಿತರಾಗಿ, ಸ್ವಇಚ್ಫೆಯಿಂದ ನಿಸ್ವಾರ್ಥಭಾವದ ಸಮಾಜಸೇವಕರಾಗ ಬೇಕು. ಸೇವಾ ಉದ್ದೇಶದಿಂದ ಸಾಂಘಿಕವಾಗಿ ಸೇರಿಕೊಂಡಾಗ ಸಾರ್ವಜನಿಕರೂ ನಮ್ಮನ್ನು ಅಳೆದು ತೂಗುತ್ತಾರೆ. ಆದ್ದರಿಂದ ಸಮಾಜಸೇವಕರಲ್ಲಿ ಸ್ವಾರ್ಥ ಮನೋಭಾವ ಸಲ್ಲದು. ಕರುನಾಡ ಜನತೆಯರಾದ ನಾವೆಲ್ಲರೂ ಬೇರೆಬೇರೆ ಪ್ರಾಂತ್ಯ, ಧರ್ಮ, ಸಮುದಾಯ, ಭಾಷಿಗರಾಗಿದ್ದು ವಿಭಿನ್ನ ಮನೋಭಾವ ಉಳ್ಳ ವರಾಗಿರುವುದು ಸಹಜ. ಆದ್ದರಿಂದ ಸಂಘಗಳಲ್ಲಿ ಭಿನ್ನತೆಗಗಳು ಸರ್ವೇ ಸಾಮಾನ್ಯ. ಬೇಧಭಾವಗಳನ್ನೆಲ್ಲಾ ಮರೆತು ಮುನ್ನಡೆದಾಗ ಮಾತ್ರ ಸಂಘ ಸಂಸ್ಥೆಗಳ ಸೇವೆಯೂ, ಸಮಾಜದ ಉದ್ಧಾರವೂ ಸಫಲತೆ ಸಾಧಿಸಬಲ್ಲದು ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ನುಡಿದರು.

ಕನ್ನಡ ಸಂಘ ಸಾಂತಾಕ್ರೂಜ್ ತನ್ನ 68ನೇ ವಾರ್ಷಿಕ ಮಹಾಸಭೆಯನ್ನು ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ನಡೆಸಿದ್ದು ಸಭಾಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣಗೈದು ಸುಜತಾ ಶೆಟ್ಟಿ ಮಾತನಾಡಿದರು.

ಸಂಘದ ಗೌರವಾಧ್ಯಕ್ಷ ಎಲ್.ವಿ ಅವಿನ್ ಮಾತನಾಡಿ 68 ವರ್ಷದಿಂದ ಸಂಘವನ್ನು ಮುನ್ನಡೆಸುತ್ತಾ ಬಂದಿರುವ ಹಿರಿಯರ ಈ ಸಂಸ್ಥೆಯನ್ನು ನೀವೆಲ್ಲಾ ಸೇರಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಇದ್ದೇವೆ. ಇದು ನಮ್ಮ ವಿಚಾರವಲ್ಲ  ಹಿರಿಯರ, ಸಂಘದ ಸ್ಥಾಪಕರ ದೂರದೃಷ್ಟಿತ್ವದ ವಿಚಾರ. ಅಂತಹ ವಿಚಾರವಾದಿಗಳ  ಸಂಘವನ್ನು ನಾವೂ ಮುನ್ನಡೆಸುತ್ತಾ ಹೋದರೆ ನಮ್ಮೊಡನೆ ಕಿರಿಯರು ಕೈಜೋಡಿಸುತ್ತಾರೆ. ಇಲ್ಲವದಲ್ಲಿ ನಮ್ಮ ಸಂಘ ಮುಂದೆ ಹೋಗುವ ಕನಸು ಪೂರ್ಣವಾಗುವುದಿಲ್ಲ. ಹಿರಿಯರ ವಿಚಾರದಂತೆ ತುಳು ಕನ್ನಡಿಗರಿಗೆ ವಿದ್ಯಾಭ್ಯಾಸ ನೀಡಬೇಕು. ಬಡತನದಿಂದ ವಿದ್ಯೆ ಪೂರ್ಣಗೊಳಿಸಲು ಅಸಂಭವವಾದಗ ಆರ್ಥಿಕ  ಸಹಾಯ ನೀಡಿ ಪ್ರೋತ್ಸಾಹಸುವುದು ನಮ್ಮ ಸಂಘದ ಉದ್ದೇಶವಾಗಿದೆ ಎಂದರು.

ಉಪಾಧ್ಯಕ್ಷ ಭಜಂಗ ಆರ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಜಯ ವಿ.ಪೂಜಾರಿ, ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಗೌರವ ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಗೌರವ ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅವಿನ್ ವೇದಿಕೆಯಲ್ಲಿ ಆಸೀನರಾಗಿದ್ದರು.

ದಾನಿಗಳ ಪ್ರಾಯೋಜಕತ್ವದಲ್ಲಿ ಸಂಘವು ವಾರ್ಷಿಕವಾಗಿ ಕೊಡಮಾಡುವ 2025ನೇ ಸಾಲಿನ ವಿದ್ಯಾಥಿಗಳ ವಾರ್ಷಿಕ ದತ್ತು ಸ್ವೀಕಾರ ಮತ್ತು ವಿದ್ಯಾಥಿ ವೇತನ (ಆಥಿಕ ಸಹಾಯನಿಧಿ) ವಿತರಣಾ ಕಾರ್ಯಕ್ರಮ ನಡೆಸಲಾಗಿದ್ದು ಉಪಸ್ಥಿತ ಪ್ರಾಯೋಜಕರುಗಳಾದ ಸುಜಾತ ಸುಧಾಕರ ಶೆಟ್ಟಿ, ಉಷಾ ವಿ.ಶೆಟ್ಟಿ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ.ಕೋಟ್ಯಾನ್, ಕಾರ್ಯದರ್ಶಿ ಶಕಿಲಾ ಪಿ.ಶೆಟ್ಟಿ, ಸಾಮಾಜಿಕ-ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ಯೋಗೇಶ್ ನೋಂಡಾ ಅವರು ಮಕ್ಕಳ ದತ್ತು ಸ್ವೀಕಾರಗೈದು ಆಯ್ದ ಮಕ್ಕಳಿಗೆ ಶೈಕ್ಷಣಿಕ ಸಹಾಯನಿಧಿ ವಿತರಿಸಿ ಶುಭಾರೈಸಿದರು.

ಸಂಘದ ಇತ್ತೀಚೆಗೆ ನಿಧನರಾದ ಸಮಿತಿ ಸದಸ್ಯರಿಗೆ ಸದ್ಗತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು.

ಸಭೆಯಲ್ಲಿ ಸಲಹಾ ಸಮಿತಿ ಸದಸ್ಯ ಭೋಜ ಎನ್.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಮಾ ಎಂ.ಪೂಜಾರಿ, ಶಾಲಿನಿ ಜಿ.ಶೆಟ್ಟಿ, ಸುಜಾತ ಎಸ್.ಉಚ್ಚಿಲ್, ಸುಮಿತ್ರಾ ಜಿ. ದೇವಾಡಿಗ, ವಾಸುದೇವ ಆರ್.ರಾವ್, ಸಂಪ ಲಕ್ಷ್ಮಣ ಬಿಲ್ಲವ, ಶಶಿ ಶೆಟ್ಟಿ, ಸೇರಿದಂತೆ ಸಂಘದ ಸದಸ್ಯರನೇಕರು ಹಾಜರಿದ್ದರು.

ವನಿತಾ ನೋಂಡಾ ಪ್ರಾರ್ಥನೆಯನ್ನಾಡಿದರು. ಜಯ ವಿ.ಪೂಜಾರಿ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ ಕೃತಜ್ಞತೆ ಸಲ್ಲಿಸಿದರು.