ಮಾಜೀ ಸಂಸದೆ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ‌ ಆಗಿದ್ದ ಕನ್ನಡದ ನಟಿಯೂ ಆದ ರಮ್ಯಾ ಅವರು ಎರಡು ವರುಷಗಳಿಂದ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡ ಕತೆಯನ್ನು ಇಂದು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

2018ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರು ಸಂಸದರ ತಂಡದೊಂದಿಗೆ ಜರ್ಮನಿಗೆ ತೆರಳಿದ್ದರು. ಮಂಡ್ಯದ ಸಂಸದೆ ಆಗಿದ್ದ ರಮ್ಯಾ ಸಹ ಇದ್ದರು.

ಬರ್ಲಿನ್ ವಸ್ತುಸಂಗ್ರಹಾಲಯ ಭೇಟಿಯ ವೇಳೆಯ ಫೋಟೋಗಳನ್ನು ತೆಗೆದ ರಮ್ಯಾ ಸೋಶಿಯಲ್ ಮೀಡಿಯಾಕ್ಕೆ ಕಳುಹಿಸಿದ್ದರು. ಅಲ್ಲಿ ನನ್ನಿಂದಾದ ಒಂದು ಸಣ್ಣ ತಪ್ಪಿಗೆ ರಾಹುಲ್ ಗಾಂಧಿ ಟ್ರೋಲ್ ಆಗಿದ್ದರು.

ರಮ್ಯಾ ಹೋಗಿ ರಾಹುಲ್‌ರಲ್ಲಿ ಕ್ಷಮೆ ಕೇಳಿದ್ದರು. ನೀಡಿದ ರಾಜೀನಾಮೆ ಸ್ವೀಕರಿಸದ ರಾಹುಲ್ ಇನ್ನು ಮುಂದೆ ಹುಶಾರಾಗಿರಿ ಎಂದಿದ್ದರು. ಆದರೆ ರಮ್ಯಾ ತಾವೇ ಎರಡಕ್ಕೂ ಹೆಚ್ಚು ವರುಷದಿಂದ ಪಕ್ಷದಲ್ಲಿ ಅಧಿಕೃತವಾಗಿ ಕಾಣಿಸಿಕೊಂಡಿಲ್ಲ. ಇಲ್ಲಿಗೆ ರಮ್ಯ ಕಥಾನಕ ಕೊನೆಗೊಂಡಿತೆಂದು ಇನ್ಸ್ಟಾಗ್ರಾಮ್ ಅರುಹಿದೆ.