ಬೆಂಗಳೂರಿನ ನೃಪತುಂಗ ರಸ್ತೆಯ ರಾಜ್ಯ ಪೋಲೀಸು ಮುಖ್ಯ ಕಚೇರಿಯಲ್ಲಿ ನಡೆದ ವಾರ್ಷಿಕ ಪೋಲೀಸು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯನವರು ಪೋಲೀಸರಿಗೆ ಬೆಳ್ಳಿ ಪದಕದ ಸಹಿತ ನಾನಾ ಕೊಡುಗೆಗಳನ್ನು ಪ್ರಕಟಿಸಿದರು.

ಕರ್ನಾಟಕ ಹೆಸರಾದ ಸುವರ್ಣ ವರುಷದ ನೆನಪಿಗೆ ಎಲ್ಲರಿಗೂ ಬೆಳ್ಳಿ ಪದಕ ಕೊಡುಗೆ. ಪ್ರತಿಯೊಬ್ಬ ಪೋಲೀಸರಿಗೆ ತಲಾ ರೂ. 1,500 ವೈದ್ಯಕೀಯ ವೆಚ್ಚ ನೀಡಿಕೆ. ಸಿಇಎನ್ ಠಾಣಾಧಿಕಾರಿಗಳ ಹುದ್ದೆ ಎಸಿಪಿ- ಡಿಸಿಪಿಗೆ ಏರಿಕೆ. ಎಲ್ಲ ಅನುಕೂಲಗಳ ಸುಸಜ್ಜಿತ ಪೋಲೀಸು ಸುವರ್ಣ ಭವನ. ಬೆಂಗಳೂರಿಗೆ ಹೆಚ್ಚುವರಿ 8 ಡಿಸಿಪಿಗಳ ನೇಮಕ ಇತ್ಯಾದಿ ಕೊಡುಗೆಗಳನ್ನು ಮುಖ್ಯಮಂತ್ರಿ ಪ್ರಕಟಿಸಿದರು.