ದಾರುವೇದಾ, ಸರ್ವೋದಯ ತೀರ್ಥ ಹರ್ಯಾಣ ಇಲ್ಲಿಯ ಸಹಸ್ರ ಕೂಟ ಜಿನಾಲಯ ಹಾಗೂ 21ಅಡಿ ಪದ್ಮಾಸನ ಪ್ರತಿಮೆ ಭಗವಾನ್ 1008 ಶಾಂತಿನಾಥ ಸ್ವಾಮಿ ಪಂಚ ಕಲ್ಯಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಜನವರಿ 12.1.24 ರಿಂದ 17.1.24ರ ವರೆಗೆ 108 ಪ.ಪೂ ಆಚಾರ್ಯ 108 ವಿಶುದ್ಧ ಸಾಗರ ಮುನಿರಾಜ್,108 ಅನುಮಾನ ಸಾಗರರ ಪಾವನ ಸಾನಿಧ್ಯ.

ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ನೇತೃತ್ವ ಮಾರ್ಗದರ್ಶನದಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಆಶೀರ್ವಾದ ನೀಡಿದ ಆಚಾರ್ಯ ವಿಶುದ್ಧ ಸಾಗರ ಮುನಿರಾಜ್ ಅಶುಭ ಭಾವದಿಂದ ಶುಭ ಭಾವ ಪಾಪದಿಂದ ಪುಣ್ಯವನ್ನು ಪಡೆದಂತೆ ದೇವರ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುದು ಸಹಕಾರ ನೀಡುದು ಧರ್ಮ ಕಾರ್ಯವಾಗುತ್ತದೆ. ಧರ್ಮದಿಂದ ಪುಣ್ಯ ವೃದ್ಧಿ ಪುಣ್ಯದಿಂದ ಪಾಪ ಕ್ಷಯ ಪಾಪ ಕ್ಷಯದಿಂದ ಸ್ವರ್ಗ ಮೋಕ್ಷವನ್ನು ಪಡೆಯಲು ಶ್ರದ್ದೆ ಉಳ್ಳ ಭಕ್ತ ಅರ್ಹತೆಯನ್ನು ಪಡೆಯುತ್ತಾನೆ. ಅನಾದಿ ಕಾಲದಿಂದ ದೇವ ಮಂದಿರ ನಿರ್ಮಾಣ ಪ್ರತಿಷ್ಠಾಪನೆ ಕಾರ್ಯ ಭಾರತದಲ್ಲಿ ನಡೆಯುತ್ತಿದೆ. ದೇಶದಲ್ಲಿ ಶಾಂತಿ ಸೌಹಾರ್ದತೆಗೆ ನಿರಂತರ ಧರ್ಮ ಆಚರಣೆ ಕಾರಣ ಎಂದು ನುಡಿದರು.


ಪಂಚ ಕಲ್ಯಾಣ ಸರ್ವಜ್ಞ ವೀತರಾಗ ಭಗವಂತರ ಕಲ್ಯಾಣದ ಕಥೆ ಆತ್ಮ ಕಲ್ಯಾಣ ಮಾಡಲು ಇಂತಹ ಪೂಜೆ ಪ್ರತಿಷ್ಠಾಪನೆ ಆಚಾರ್ಯರ ಉಪಸ್ಥಿತಿಯಲ್ಲಿ ಪ್ರೇರಣೆ ಸಿಗುದು ಎಂದು ಐದು ದಿನದ ಕಾರ್ಯಕ್ರಮದ ಉಪಸ್ಥಿತಿ ನೀಡಿ ಮೂಡುಬಿದಿರೆ ಸ್ವಾಮೀಜಿ ಆಶೀರ್ವಾದ ನೀಡಿದರು. ಕಾರ್ಯಕ್ರಮದಲ್ಲಿ ಅರುಣ್ ಜೈನ್, ಅನಿಲ್ ಜೈನ್, ರಾಜ್ ಕುಮಾರ್ ಜೈನ್ ಧರ್ಮಸ್ಥಳ ಸುರೇಂದ್ರ ಕುಮಾರ್ ಅನಿತಾ ಸುರೇಂದ್ರ ಕುಮಾರ್, ಅಧ್ಯಕ್ಷ ಪ್ರದ್ಯುಮ್ನ ಜೈನ್, ವಕೀಲ್ ಕಿಲ್ಲಿ ಮಾಲ್ ಜೈನ್ ಅಲ್ವಾರ್, ಮನೋಜ್ ಜೈನ್, ಅಜಯ್ ವಂದನಾ, ಅನುಭವ ಕಲ್ಪನಾ, ಸಂಜಯ್ ಪ್ರೀತಿ ಜೈನ್ ದೆಹಲಿ ಉಪಸ್ಥಿತರಿದ್ದರು. ಪ್ರತಿಷ್ಠಾಚಾರ್ಯ ಹಸ್ತಿನಾಪುರ ನರೇಶ್ ಪಂಡಿತ್, ತಂಡ ಸೋಲಾಪುರ್ ಮಹಾವೀರ್ ಶಾಸ್ತ್ರೀ ಪಂಚಕಲ್ಯಾಣ ಪೂಜೆ ನೆರವೇರಿಸಿದರು.