ಸುರತ್ಕಲ್ ಕೃಷ್ಣಾಪುರ ನೆಯ್ತಂಗಡಿಯ ವ್ಯಾಪಾರಿ 45ರ ಅಬ್ದುಲ್ ಜಲೀಲ್ ಕೊಲೆಯಲ್ಲಿ ನೇರ ಭಾಗಿಯಾದ ಮೂವರನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ 10 ದಿನಗಳ ಪೋಲೀಸು ಕಸ್ಟಡಿಗೆ ಪಡೆಯಲಾಗಿದೆ ಎಂದು ಪೋಲೀಸು ಕಮಿಶನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕೃಷ್ಣಾಪುರದ 21ರ ಶೈಲೇಶ್ ಪೂಜಾರಿ, ಹೆಜಮಾಡಿ ಎನ್ಎಚ್ ರಸ್ತೆಯ 24ರ ಸವೀನ್ ಕಾಂಚನ್ ಮತ್ತು ಕೃಷ್ಣಾಪುರದ ಪವನ್ ಬಂಧಿತರು. ಕೊಲೆ ನಡೆಸಿದ ಬಳಿಕ ಪವನ್ ಬೈಕಿನಲ್ಲಿ ಕೊಲೆಗಾರರು ಪರಾರಿಯಾಗಿದ್ದಾರೆ. ಪವನ್ ಹಿಂದೆಯೇ ಕಾಪು ತಲುಪಿ ಲಾಡ್ಜ್‌ನಲ್ಲಿ ಕೋಣೆ ಮಾಡಿ ಮಲಗಿದ್ದಾನೆ. ಮೂವರೂ ಮುಂಬಯಿಗೆ ಪರಾರಿಯಾಗಲು ತಯಾರಾಗುವಾಗ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆಂದು ಕಮಿಶನರ್ ತಿಳಿಸಿದ್ದಾರೆ.
ಮಹಿಳೆ ಸಹಿತ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗುತ್ರಿದೆ. ಓಡಿ ಹೋಗಿರುವ ಕೊಲೆಗೆ ಪ್ರಚೋದನೆ ನೀಡಿದವನನ್ನು ಪೋಲೀಸರು ಹುಡುಕುತ್ತಿದ್ದಾರೆ.