ಸುರೇಂದ್ರ ಬಲ್ಲಾಳ್

ಉಜಿರೆ: ಧರ್ಮಸ್ಥಳ ಗ್ರಾಮದ ನಿವಾಸಿ ಸುರೇಂದ್ರ ಬಲ್ಲಾಳ್(66) ಸೋಮವಾರ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ.

ಅವರು ಕಬಡ್ಡಿ ಆಟಗಾರರಾಗಿದ್ದು ಹಲವಾರು ಪಂದ್ಯಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಧರ್ಮಸ್ಥಳದಲ್ಲಿ ದೇವಸ್ಥಾನದ ವಸತಿ ಛತ್ರದಲ್ಲಿ ಪ್ರಬಂಧಕರಾಗಿ ಅವರು ಮೂವತ್ತು  ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.