ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಬದಲಾಯಿಸುವಂತೆ ಕಾಂಗ್ರೆಸ್‌ನ ಅಗ್ರ ನಾಯಕಿ ಸೋನಿಯಾ ಗಾಂಧಿಯವರಿಗೆ 50ರಷ್ಟು ಶಾಸಕರು ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.

ಚಂಡಿಗಡದ ಕಾಂಗ್ರೆಸ್ ಭವನದಲ್ಲಿ ಶಾಸಕರ ಸಭೆ ಕರೆಯಲಾಗಿದೆ. ಕೇಂದ್ರದ ವೀಕ್ಷಕರಾಗಿ ಅಜಯ್ ಮಾಕೆನ್ ಮತ್ತು ಹರೀಶ್ ಚೌಧರಿಯವರು ಚಂಡಿಗಡಕ್ಕೆ ಬಂದಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾವತ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

ಈ ನಡುವೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ತನ್ನನ್ನು ಅವಮಾನಿಸಲಾಗುತ್ತಿದೆ ಎಂದು ಸೋನಿಯಾರಿಗೆ ದೂರಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಪಂಜಾಬ್ ವಿಧಾನ ಸಭಾ ಚುನಾವಣೆ ನಡೆಯಲಿದೆ. ಆದರೆ ಭಿನ್ನಮತ ಭುಗಿಲೆದ್ದಿದೆ.