ಪೂಜ್ಯ ಹೆಗ್ಗಡೆಯವರು ಕೇಂದ್ರದ ಮಾನ್ಯ ಸಾಂಸ್ಕ್ರತಿಕ  ಮತ್ತು ಪ್ರವಾಸೋದ್ಯಮ ಸಚಿವರಾದ ಕಿಶನ್‍ ರೆಡ್ಡಿಯವರನ್ನು ಇಂದು ನವದೆಹಲಿಯಲ್ಲಿ ಭೇಟಿಯಾಗಿ ಜಾರ್ಖಂಡ್‍ ರಾಜ್ಯದ ಪ್ರಸಿದ್ಧ ಜೈನ ಕ್ಷೇತ್ರವಾದ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ಕೇಂದ್ರವೆಂದು ಅಲ್ಲಿನ ರಾಜ್ಯ ಸರ್ಕಾರವು ಪರಿಗಣಿಸಿರುವುದನ್ನು ಕೈಬಿಡಬೇಕೆಂದು ಒತ್ತಾಯಿಸಿದರು. 

ಇದಕ್ಕೆ ಉತ್ತಮ ರೀತಿಯಲ್ಲಿ  ಸ್ಪಂದಿಸಿದ ಮಾನ್ಯ ಸಚಿವರು, ನಾನು ಈಗಾಗಲೇ ಲೋಕ ಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವುದಾಗಿ ಮತ್ತು ತಮ್ಮ ಕೋರಿಕೆಯ ಮೇರೆಗೆ ತಕ್ಷಣ ಜಾರ್ಖಂಡ್‍ ನಮಾನ್ಯ ಮುಖ್ಯ ಮಂತ್ರಿಯವರಿಗೆ ಮತ್ತೊಂದು ಪತ್ರವನ್ನು ಬರೆದು ಸಮ್ಮೇದ ಶಿಖರ್ಜಿಯ ಪಾವಿತ್ರ್ಯತೆಯನ್ನು ಉಳಿಸುವಂತೆ ಮತ್ತು ಪ್ರವಾಸಿ ತಾಣ ಎಂಬುದನ್ನು ಕೈ ಬಿಡಬೇಕೆಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.