ಕಾರ್ಕಳ:  ಗ್ರಾಮಾಂತರ ಪೋಲೀಸು ಠಾಣೆ ವ್ಯಾಪ್ತಿಯ ಕಲ್ಯಾ ಕಂಗಿತ್ಲು ಉಷಾ ಅಂಚನ್ ಮನೆಯಲ್ಲಿ ನಡೆದ ಕಳ್ಳತನದ ಸಂಬಂಧ ಇಬ್ಬರನ್ನು ಬಂಧಿಸಿದ ಪೋಲೀಸರು ಕಳುವಾಗಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡರು.

ಬಂಟ್ವಾಳ ಅರಂಬೋಡಿಯ 34ರ ಪ್ರಸಾದ್ ಮತ್ತು ಕಲ್ಯಾ ಮೂಲದ 39ರ ಶಿಬಾ ಬಂಧಿತರು. ಅವರನ್ನು ನ್ಯಾಯಾಲಯದಲ್ಲಿ ನಿಲ್ಲಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. 

ಡಿಸೆಂಬರ್ 3ರಂದು ರಾತ್ರಿ ಮೆಹಂದಿ ಕಾರ್ಯಕ್ರಮಕ್ಕೆ ಹೋದಾಗ ಈ ಕಳ್ಳತನ ಆಗಿತ್ತು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಉಷಾ ಅಂಚನ್ ಸ್ನೆಹಿತೆಯೇ ಆಗಿದ್ದ ಶಿಬಾ ತನ್ನ ಗೆಳೆಯ ಪ್ರಸಾದ್‌ಗೆ ಮಾಹಿತಿ ನೀಡಿ ಗೆಳತಿ ಜೊತೆಗೆ ಏನೂ ಗೊತ್ತಿಲ್ಲದಂತೆ ಇದ್ದಳು.

ಪ್ರಸಾದ್ ಮೇಲೆ ಹಿಂದೆಯೇ ಹತ್ತಾರು ಪ್ರಕರಣಗಳು ಇರುವುದು ತಿಳಿದು ಬಂದಿದೆ.