ಬಾಲಕ ಭರತ್ ಕೊಲೆ ಮಾಡಿ, ಬಾಲಕನ ತಾಯಿ ಗೀತಾ ಬಾರಕೇರ ಹಾಗೂ ಸಹ ಶಿಕ್ಷಕ ಸಂಗನಗೌಡ ಪಾಟೀಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಹದ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೋಲೀಸರು ಬಂಧಿಸಿದರು.

ಆರೋಪಿಯು ನರಗುಂದ ಬಳಿಯ ರೋಣ ಕ್ರಾಸ್‌ನಲ್ಲಿ ಬೇರೆ ಊರಿಗೆ ವಾಹನ ಹಿಡಿಯಲು ಪ್ರಯತ್ನಿಸುವಾಗ ಬಂಧಿಸಲಾಗಿದೆ. 

ನನಗೂ ಗೀತಾ ಅವರಿಗೂ ಸಾಮಿಪ್ಯ ಇತ್ತು. ಇತ್ತೀಚೆಗಿನ ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಗೀತಾಳು ಸಹ ಶಿಕ್ಷಕ ಸಂಗನಗೌಡ ಪಾಟೀಲ ಜೊತೆಗೆ ಸಲಿಗೆಯಿಂದ ವರ್ತಿಸಿದ್ದು ನನಗೆ ಹಿಡಿಸದ್ದರಿಂದ ಹಲ್ಲೆ ಮಾಡಿದೆ ಎಂದು ಆರೋಪಿ ಹೇಳಿದ್ದಾನೆ. ಗೀತಾ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಆಕೆಯ ಮೊಬಾಯಿಲ್‌ನಲ್ಲಿ ಆರೋಪಿಯ ಹೇಳಿಕೆಗೆ ಯಾವುದೇ ಚಾಟಿಂಗ್ ಸಾಕ್ಷ್ಯ ಇಲ್ಲ. ಆದರೆ ಮುತ್ತಪ್ಪ ಹಡಗಲಿಯು ಗೀತಾ ಬಾರಕೇರ ಮೇಲಿನ ಮೋಹದಿಂದ ಈ ಹಲ್ಲೆ ನಡೆಸಿದ್ದಾನೆ ಎಂದು ಗದಗ ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.