ಮುಲ್ಕಿ: ವಿಜಯ ರೈತರ ಸೇವಾ ಸಹಕಾರಿ ಸಂಘದ 47ನೇ ವಾರ್ಷಿಕ ಮಹಾ ಸಭೆ ಮುಲ್ಕಿ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ವಹಿಸಿ ಮಾತನಾಡಿ ಸಂಘವು ಕೃಷಿಗೆ ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದು ಸಂಘದ ಅಭಿವೃದ್ಧಿಗೆ ನಿರ್ದೇಶಕರು ಸದಸ್ಯರು ಕಾರಣಕರ್ತರಾಗಿದ್ದು ಈ ಬಾರಿ ಡಿವಿಡೆಂಡ್ ಶೇ.14 ವಿತರಿಸಲಾಗಿದ್ದು ಅಭಿವೃದ್ಧಿ ನಿರಂತರವಾಗಿ ನಡೆಯಲಿದೆ ಎಂದರು.

ಚರ್ಚೆಯಲ್ಲಿ ಸಂಘದ ಸದಸ್ಯರಾದ ಅಬ್ದುಲ್ ರಜಾಕ್,ಸಾಧು ಅಂಚನ್, ಹರಿಶ್ಚಂದ್ರ ಶೆಟ್ಟಿ ಕರ್ನೀರೆ,ಜಗನ್ನಾಥ್ ಕರ್ಕೇರ ಮತ್ತಿತರರು ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಾಧ್ಯಕ್ಷ ಪ್ರಸಾದ್‌ ಶೆಟ್ಟಿ, ನಿರ್ದೇಶಕರಾದ ಗಂಗಾಧರ ವಿ ಶೆಟ್ಟಿ, ಅಶೋಕ್‌ ಕುಮಾರ್ ಚಿತ್ರಾಪು, ನರಸಿಂಹ ಪೂಜಾರಿ, ದೇವಪ್ರಸಾದ್, ಪುಷ್ಪ ಎಂ, ಪದ್ಮನಿ ಶೆಟ್ಟಿ, ರಾಜೇಶ್ ಶೆಟ್ಟಿ, ರಾಮ ನಾಯ್ಕ, ನಂಜುಂಡ ಆರ್ ಕೆ, ಆಡಳಿತ ನಿರ್ದೇಶಕ ಶಿವರಾಮ ಶೆಟ್ಟಿ, ಬ್ಯಾಂಕ್‌ ಆಫ್‌ ಬರೋಡ ಶಾಖಾಧಿಕಾರಿ ಪ್ರಜ್ವಲ್ ಜೆ ಹೆಗ್ಡೆ,ಶಾಖಾಧಿಕಾರಿ ಚಂದ್ರಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮನೋಹರ ಕೋಟ್ಯಾನ್ ನಿರೂಪಿಸಿದರು. ಸಭೆಯಲ್ಲಿ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರಗತಿಪರ ಕೃಷಿಕರಾದ ಅಂಬರೀಶ ಶೆಟ್ಟಿ ಶಿಮಂತೂರು, ವಿಠಲ ಎಸ್.ಕುಕ್ಯಾನ್,ಯಮುನಾ ಎಸ್.ಶೆಟ್ಟಿ,ಜೋಸೆಫ್ ಡಿಸೋಜಾ ಮೈಲಾರಪ್ಪ ಪೂಜಾರ, ರವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕ ತಿಮ್ಮಪ್ಪ ಶೆಟ್ಟಿ ಹಾಗೂ ಲಲಿತ್ ಮಹಲ್ ನ ಬಿಲ್ಲವ ಮುಖಂಡರಾದ ಎಚ್.ವಿ.ಕೋಟ್ಯಾನ್ ರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.