ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯನವರು ಲೋಹಿಯಾ ವೇದಿಕೆ ಏರ್ಪಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ ವಿಚಾರ ಸಂಕಿರಣದಲ್ಲಿ ಮಾತನಾಡುತ್ತ 2039ರ ಲೋಕಸಭೆ ಚುನಾವಣೆ ವೇಳೆಗೂ ಮಹಿಳಾ ಮೀಸಲಾತಿ ಆರಂಭವಾಗದು ಎಂದು ಸಂದೇಹ ವ್ಯಕ್ತಪಡಿಸಿದರು.

ಚುನಾವಣೆ ಮತ್ತು ಮತ ಪಡೆಯಲು ಆತುರಾತುರವಾಗಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿದೆ. ಬಿಜೆಪಿಗೆ ಯಾವ ಮಹಿಳಾ ಕಾಳಜಿಯೂ ಇಲ್ಲ. ಮಹಿಳಾ ಮೀಸಲಾತಿ ಜಾರಿಗೆ 15 ವರುಷಗಳ ಕಾಲಮಿತಿ ವಿಧಿಸಿರುವುದು ಏಕೆ? ಆ ಮಸೂದೆಯು ಕರಾರುಗಳ ಮೂಟೆಯನ್ನು ಹೊತ್ತಿದೆ. ಅದನ್ನು ದಾಟಿ ಅದು ಜಾರಿಗೆ ಬರುವಂತೆ ಕಾಣುತ್ತಿಲ್ಲ. ಮಹಿಳೆಯರಿಗೆ ಮೀಸಲಾತಿ ಇಲ್ಲದೆಯೇ ಟಿಕೆಟ್ ಕೊಡಲು ಅವಕಾಶ ಇದ್ದರೂ ಯಾವ ನಾಯಕರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.